ಬದುಕು ಕಾಯೋ ಚೌಕಿದಾರ ಅಪ್ಪನಿಗಾಗಿ ಈ ಹಾಡು

 ಬದುಕು ಕಾಯೋ ಚೌಕಿದಾರ ಅಪ್ಪನಿಗಾಗಿ ಈ ಹಾಡು

ಚೌಕಿದಾರ್ ಸಿನಿಮಾ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಚಿತ್ರವೀಗ ಹಾಡಿನ ಮೂಲಕ ಸಿನಿರಸಿಕರಿಗೆ ಆಮಂತ್ರಣ ಕೊಟ್ಟಿದೆ. ಚೌಕಿದಾರ್ ಸಿನಿಮಾದ ಮೊದಲ ಹಾಡು, ‘Appa anthem song‘ MRT ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಅನಾವರಣಗೊಂಡಿದೆ. ಅಪ್ಪ ಮಗನ ಬಾಂಧವ್ಯದ ಗೀತೆಯಲ್ಲಿ ಸಾಯಿ ಕುಮಾರ್ ಹಾಗೂ ಪೃಥ್ವಿ ಅಂಬಾರ್ ತಂದೆ ಮಗನಾಗಿ ಕಾಣಿಸಿಕೊಂಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಪೊಣಿಸಿರುವ ಹಾಡಿಗೆ ಸಚಿನ್ ಬಸ್ರೂರ್ ಸಂಗೀತ, ವಿಜಯ್ ಪ್ರಕಾಶ್ ಅವರ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ.

ಚೌಕಿದಾರ್ ಸಿನಿಮಾದಲ್ಲಿ ಸ್ಟಾರ್ ಕಾಸ್ಟ್ ಆಕರ್ಷಕವಾಗಿದೆ. ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇಲ್ಲಿ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ರಗಡ್ ರೋಲ್ ಮೂಲಕವೇ ಎಲ್ಲರ ಗಮನ ಸೆಳೆಯಲಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಈ ಸಿನಿಮಾದಲ್ಲಿದ್ದಾರೆ. ಸುಧಾರಾಣಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.

ಪ್ರತಿ ಸಿನಿಮಾಗಳಲ್ಲಿನ ಕಥೆಗೆ ಸಂಶೋಧನೆ ಮಾಡುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್ ಗೂ ಸಾಕಷ್ಟು ವರ್ಕ್ ಮಾಡಿದ್ದಾರೆ. ಪ್ರತಿ ಬಾರಿಯೂ ಹೊಸ ಕಥೆಯನ್ನು ಹೆಕ್ಕಿ ತರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ‌. ಈ ಬಾರಿ ಕೂಡ ಫ್ರೆಶ್ ಕಥೆಯೊಂದಿಗೆ ಹಾಜರಾಗಿದ್ದಾರೆ‌. ಚೌಕಿದಾರ್ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಚಿನ್‌ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಸಾಹಿತ್ಯ ಬರೆದಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬರ್ ಮಾಸ್ ಲುಕ್ ಕೊಡಲಿದ್ದಾರೆ.

ಹಾಡಿಗೆ ಮೆಚ್ಚುಗೆ ಸುರಿಮಳೆ:

ಅಪ್ಪ ಮಗನ ಬಾಂಧವ್ಯದ ಚೌಕಿದಾರ್ ಸಿನಿಮಾದ ಹಾಡಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಶಾಲೆಯ ಶಿಕ್ಷಕರು, ಪ್ರಾಧ್ಯಾಪಕರು ಪತ್ರ ಬರೆದು ಅಭಿಪ್ರಾಯ ತಿಳಿಸುತ್ತಿದ್ದಾರಂತೆ. ಅಪ್ಪ ಎಂಬ ಅಮೃತ ಬಿಂದು, ಕುಟುಂಬದ ಚೌಕಿದಾರ್ ಅಪ್ಪನನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ ಎನ್ನಲಾಗಿದೆ.

cinibeat