ಬಿಗ್‌ ಬಾಸ್‌ ಈ ವಾರ ನೋ ಎಲಿಮಿನೇಷನ್‌! ಸೀಕ್ರೆಟ್‌ ರೂಮ್‌ ತೆರೆಯುತ್ತಾ??

 ಬಿಗ್‌ ಬಾಸ್‌ ಈ ವಾರ ನೋ ಎಲಿಮಿನೇಷನ್‌! ಸೀಕ್ರೆಟ್‌ ರೂಮ್‌ ತೆರೆಯುತ್ತಾ??

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಆರಂಭವಾಗಿ 9 ವಾರಗಳು ಉರುಳಿವೆ. 10ನೇ ವಾರ ಚಾಲ್ತಿಯಲ್ಲಿದೆ. ಈಗಾಗಲೇ ‘ಬಿಗ್ ಬಾಸ್’ ಮನೆಯಿಂದ ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್‌ ಔಟ್ ಆಗಿದ್ದಾರೆ. ರಂಜಿತ್, ಜಗದೀಶ್ ಕಿಕ್ ಔಟ್ ಆಗಿದ್ದಾರೆ. ಶೋಭಾ ಶೆಟ್ಟಿ ಕ್ವಿಟ್ ಮಾಡಿದ್ದಾರೆ. ಈ ವಾರ ಯಾರು ಔಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ಈ ವಾರ ಎಲಿಮಿನೇಷನ್ ಇಲ್ಲ.

ಈ ವಾರ.. ಅರ್ಥಾತ್ 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಪ್ರಸಾರವಾಗಿದ್ದು ಗುರುವಾರದ ಸಂಚಿಕೆಯಲ್ಲಿ. ಈ ವಾರ ಎಲಿಮಿನೇಷನ್ ಇದ್ದಿದ್ದರೆ.. ಗುರುವಾರದ ಸಂಚಿಕೆ ಮುಕ್ತಾಯವಾದ ಬೆನ್ನಲ್ಲೇ ವೋಟಿಂಗ್ ಲೈನ್ಸ್ ಓಪನ್ ಆಗಬೇಕಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಕಳೆದರೂ.. ವೋಟಿಂಗ್ ಲೈನ್ಸ್ ತೆರೆದಿಲ್ಲ. ಅಲ್ಲಿಗೆ, ಈ ವಾರ ಎಲಿಮಿನೇಷನ್ ಇಲ್ಲ ಅಂತಾಯ್ತು.

ಈ ವಾರದ ನಾಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿ ನಡೆಯಿತು. ಬೆನ್ನಿಗೆ ಚೂರಿ ಚುಚ್ಚುವ ಮುಖಾಂತರ ನಾಮಿನೇಟ್ ಮಾಡಬೇಕಿತ್ತು. ನಾಮಿನೇಷನ್ ಬಳಿಕ ವಾದ – ಪ್ರತಿವಾದಕ್ಕೂ ಅವಕಾಶ ನೀಡಲಾಗಿತ್ತು. ಕೊನೆಗೆ ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ರಜತ್ ಕಿಶನ್‌ ನಾಮಿನೇಟ್ ಆಗಿದ್ದಾರೆ.

ಈ ವಾರ ಒಟ್ಟು 8 ಮಂದಿಗೆ ನಾಮಿನೇಷನ್‌ ಟೆನ್ಷನ್‌ ಕೊಟ್ಟಿದ್ದಾರೆ ‘ಬಿಗ್ ಬಾಸ್’. ಹಾಗಾದ್ರೆ, ಈ ವೀಕೆಂಡ್‌ನಲ್ಲಿ ‘ಬಿಗ್ ಬಾಸ್’ ಬಹು ದೊಡ್ಡ ಟ್ವಿಸ್ಟ್ ಏನಾದರೂ ಕೊಡ್ತಾರಾ? ಕಳೆದ ಕೆಲವು ಸೀಸನ್‌ಗಳಿಂದ ಸೀಕ್ರೆಟ್‌ ರೂಮ್‌ ಬಂದ್ ಆಗಿಯೇ ಇದೆ. ಈ ಬಾರಿ ಸೀಕ್ರೆಟ್‌ ರೂಮ್‌ ತೆರೆಯುವ ಪ್ಲಾನ್‌ ‘ಬಿಗ್ ಬಾಸ್‌’ಗೆ ಇದ್ಯಾ? ಮೊದಲೇ ತ್ರಿವಿಕ್ರಮ್‌ ಬಗ್ಗೆ ಮೋಕ್ಷಿತಾ ಪೈಗೆ ಗೊಂದಲ, ಅನುಮಾನಗಳಿವೆ. ಒಬ್ಬರ ಬೆನ್ನ ಹಿಂದೆ ತ್ರಿವಿಕ್ರಮ್‌ ನಿಜವಾಗಿಯೂ ಮಾತಾಡ್ತಾರಾ? ತ್ರಿವಿಕ್ರಮ್ ಸುಳ್ಳು ಹೇಳ್ತಾರಾ ಎಂಬ ಕ್ಲಾರಿಟಿ ಮೋಕ್ಷಿತಾಗೆ ಸಿಗಬೇಕು ಅಂದ್ರೆ ಸೀಕ್ರೆಟ್‌ ರೂಮ್‌ ಬೆಸ್ಟ್ ಆಪ್ಷನ್.

ಮಂಜು, ಗೌತಮಿ ಜಾಧವ್‌ ಹಾಗೂ ಮೋಕ್ಷಿತಾ ಮಧ್ಯೆ ಭಿನ್ನಾಭಿಪ್ರಾಯ, ಮನಸ್ತಾಪ ಇದೆ. ಮೋಕ್ಷಿತಾ ಎಲಿಮಿನೇಟ್ ಅಂತ ತೋರಿಸಿ.. ಸೀಕ್ರೆಟ್‌ ರೂಮ್‌ಗೆ ಹೋದರೆ.. ತಾವಿಲ್ಲದ ಮನೆಯಲ್ಲಿ ತಮ್ಮ ಬಗ್ಗೆ ಯಾರ್ಯಾರು ಏನೇನು ಮಾತಾಡ್ತಾರೆ? ತಮ್ಮ ಬಗ್ಗೆ ಗೌತಮಿ, ಮಂಜು ಏನೆಲ್ಲಾ ಮಾತಾಡಿಕೊಳ್ಳಬಹುದು ಎಂಬ ಸ್ಪಷ್ಟನೆಯೂ ಮೋಕ್ಷಿತಾಗೆ ಸಿಗಬಹುದು. ಒಳ್ಳೆಯ ಪರಿವರ್ತನೆ ಆದರೆ ಮೂವರ ನಡುವಿನ ಮನಸ್ತಾಪಕ್ಕೂ ಫುಲ್ ಸ್ಟಾಪ್‌ ಬೀಳಬಹುದು. ಇಲ್ಲಾಂದ್ರೆ, ಇನ್ನೂ ಬೆಂಕಿ ಹೊತ್ತಿ ಉರಿಯಬಹುದು.

cinibeat