ಅಪ್ಪು ಟ್ರೋಫಿ ಗೆಲ್ಲಲ್ಲು ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಫೈನಲ್ ಚಾನ್ಸ್
ವೀಕೆಂಡ್ ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗ್ರಾಂಡ್ ಫಿನಾಲೆ ಧಮಾಕ; ವೀಕ್ಷಕರ ಮನದಲ್ಲಿ ಶುರುವಾಗಲಿದೆ ತಕಧಿಮಿತ!
ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಮಾತ್ರವಲ್ಲದೇ ರಿಯಾಲಿಟಿ ಶೋಗಳಿಗೆ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈ ರಿಯಾಲಿಟಿ ಶೋಗಳಲ್ಲಿ ಒಂದಾದ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ಕರ್ನಾಟಕ ಡಾನ್ಸ್ ಈಗ ಕೊನೆಯ ಹಂತಕ್ಕೆ ತಲುಪಿದೆ.
ಇಡೀ ಸೀಸನ್ ಫುಲ್ ಮನರಂಜನೆ ನೀಡಿದ್ದು, ವಿಭಿನ್ನ ನೃತ್ಯ ಪ್ರಕಾರಗಳಿಂದ ಈಗಾಗಲೇ ಜನರ ಮನ ಗೆದ್ದಿದೆ. ಸಾಹಸಮಯ, ಹಾಸ್ಯಮಯ ಸೇರಿ ಹಲವು ರೀತಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನ ತೋರಿಸಿದ್ದಾರೆ. ಈ ಬಾರಿಯ Dance Karnataka Dance ಫಿನಾಲೆ ವೀಕ್ಷಕರನ್ನು ಮತ್ತಷ್ಟು ರೋಮಾಂಚನಗೊಳಿಸಲಿದೆ.
ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಕ್ರೇಜಿ ಕ್ವೀನ್ ರಕ್ಷಿತಾ, ಡಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್, ವಿಜಯ ರಾಘವೆಂದ್ರ ಇವರಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ನಿರ್ವಹಿಸಲಿದ್ದಾರೆ.
ಶಶಾಂಕ್-ಕಾವ್ಯ, ಗಿಲ್ಲಿ ನಟ-ಹನೀಶ, ಸುಮುಖ್-ಸಿಹಿ, ಶಶಾಂಕ್-ಪ್ರಿಯಾ, ಉಜ್ವಲ್-ಗಗನ, ಜಾಹ್ನವಿ-ಕಂಠಿ, ಶ್ರೀವಲ್ಲಿ-ನಿತಿನ್, ಯಶಸ್ವಿನಿ-ಚೆರ್ರಿ ನಡುವೆ ಕೊನೆಯ ಹಂತದ ಹಣಾಹಣಿ ನಡೆಯಲಿದ್ದು ಅಪ್ಪು ಟ್ರೋಫಿ ಯಾರ ಪಾಲಾಗಲಿದೆ ಅನ್ನೋ ಕುತೂಹಲಕ್ಕೆ ಡಿಸೆಂಬರ್ 8 ರಂದು ಉತ್ತರ ಸಿಗಲಿದೆ.
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಅಪ್ಪು ಟ್ರೋಫಿ ಯಾರ ಪಾಲಾಗಲಿದೆ ಎಂದು ತಿಳಿದುಕೊಳ್ಳಲು ವೀಕ್ಷಿಸಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗ್ರಾಂಡ್ ಫಿನಾಲೆ ಜೀ಼ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 8 ರಂದು ಸಂಜೆ 6 ಗಂಟೆಯಿಂದ.