Operation Sindoor ಬಗ್ಗೆ ತಾರೆಯರ ಪ್ರತಿಕ್ರಿಯೆ

 Operation Sindoor ಬಗ್ಗೆ ತಾರೆಯರ ಪ್ರತಿಕ್ರಿಯೆ

ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಅಮಾನುಷ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಸೇನೆ ʼಆಪರೇಶನ್‌ ಸಿಂದೂರ್‌ʼ ನಡೆಸಿ, 9 ಆತಂಕವಾದಿ ತಾಣಗಳನ್ನು ನಾಶಗೊಳಿಸಿದೆ. ಈ ವಿಷಯವನ್ನು ಭಾರತ ಚಿತ್ರರಂಗದ ಹಲವು ತಾರೆಯರು ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ರಿತೇಶ್‌ ದೇಶಮುಖ್‌, ಪರೇಶ್‌ ರಾವಲ್‌, ಅನುಪಮ್‌ ಖೇರ್‌, ಸೇರಿದಂತೆ ಹಲವರು ʼಭಾರತ ಸೇನೆಗೆ ಸಲಾಂʼ ಎನ್ನುವ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಕಾಜಲ್‌ ಅಗರ್ವಾಲ್‌, ಕಂಗನಾ ರಣಾವತ್, ನಿಮ್ರತ್‌ ಕೌರ್‌, ತಾಪ್ಸಿ ಪನ್ನು, ವಿವೇಕ್‌ ಅಗ್ನಿಹೋತ್ರಿ, ಮಧುರ್‌ ಭಂಡರ್ಕರ್‌ ಸೇರಿದಂತೆ ಹಲವು ಬಾಲಿವುಡ್‌ ಸೆಲೆಬ್ರಿಟಿಗಳು ʼಆಪರೇಶನ್‌ ಸಿಂದೂರ್‌ʼಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: HIT 3 Telugu movie review : More action, less suspense

ಟಾಲಿವುಡ್‌ ನಟ ಚಿರಂಜೀವಿ, ʼಜೈ ಹಿಂದ್‌ʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. ಜೂ,. ಎನ್‌ಟಿಆರ್‌, ʼಎಲ್ಲ ಸೈನಿಕರ ಭದ್ರತೆಗೆ ಪ್ರಾರ್ಥಿಸುವೆʼ ಎಂದು ಬರೆದರೆ, ಅಲ್ಲು ಅರ್ಜುನ್‌, ʼನ್ಯಾಯ ದೊರೆಯಲಿ. ಜೈ ಹಿಂದ್‌ʼ ಎಂದು ಬರೆದಿದ್ದಾರೆ. ವಿಶ್ವಕ್‌ ಸೇನ, ಸಾಯಿ ಧರ್ಮ ತೇಜ್‌, ಸಮಂತಾ ಸೇರಿದಂತೆ ಹಲವು ತಾರೆಯರು ಈ ಘಟನೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://www.youtube.com/live/jTRlLh_AaV8?si=hg97XbJFa24HRTWV

ಸೂಪರ್‌ ಸ್ಟಾರ್‌ ರಜಿನಿಕಾಂತ್ ಪ್ರತಿಕ್ರಿಯೆ ಹೀಗಿದೆ:

ಹೋರಾಟಗಾರನ ಹೋರಾಟ ಪ್ರಾರಂಭವಾಗಿದೆ…
ಮಿಷನ್ ಪೂರ್ಣವಾಗುವವರೆಗೆ ನಿಲ್ಲಿಸುವುದಿಲ್ಲ!
ಪೂರ ಭಾರತವು ನಿಮ್ಮೊಂದಿಗಿದೆ.

https://x.com/rajinikanth/status/1919974059565318493?s=19

ಕಿಚ್ಚ ಸುದೀಪ್ ಟ್ವೀಟ್‌ ಇದು:‌

ಭಾರತದ ಪುತ್ರನಾಗಿ… ಈ ಪವಿತ್ರ ಭೂಮಿಯ ಮಗನಾಗಿ,
ಪಹಲ್ಗಾಂವಿನಲ್ಲಿ ನೋವಿನ ನಡುಕು ನನಗೂ ಆಗಿತ್ತು.
ಇಂದು, ನ್ಯಾಯದ ಗರ್ಜನೆ ಅನುಭವಿಸುತ್ತಿದ್ದೇನೆ.

ಆಪರೇಷನ್ ಸಿಂಧೂರ – ಈದು ಕೇವಲ ಮಿಷನ್ ಅಲ್ಲ,
ಇದು ಭಾರತಮಾತೆಯ ಸಿಂಧೂರಕ್ಕೆ ತೆಗೆದುಕೊಂಡ ಪ್ರತಿಜ್ಞೆ.
ಭಾರತದ ಸಿಂಧೂರ ಧೂಳಿಗೆ ತೊಳೆದಿತ್ತು…
ನಮ್ಮ ವೀರರು ಬೆಂಕಿಯಿಂದ, ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದರು.

ನಮ್ಮ ಸೈನ್ಯಕ್ಕೆ ನನ್ನ ಅನಂತ ವಂದನೆಗಳು.
ಮಾನ್ಯ ಪ್ರಧಾನಮಂತ್ರಿ ಮತ್ತು ರಕ್ಷಣಾ ನಾಯಕತ್ವಕ್ಕೆ ಧೈರ್ಯದಿಂದ, ದೃಢತೆಯಿಂದ ನಿಲ್ಲಿದಕ್ಕಾಗಿ ಧನ್ಯವಾದಗಳು.
ಕರೆನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಬುದ್ಧಿವಂತ, ಗೌರವಾನ್ವಿತ ಬ್ರೀಫಿಂಗ್‌ಗೆ ವಂದನೆಗಳು.

https://x.com/KicchaSudeep/status/1920003067107541236?s=19

ಇಷ್ಟೇ ಅಲ್ಲ, ಕನ್ನಡದ ಹಲವು ತಾರೆಯರು, ನಿರ್ದೇಶಕರು, ನಿರ್ಮಾಪಕರು ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ʼಆಪರೇಶನ್‌ ಸಿಂದೂರ್‌ʼ ಇಡೀ ದೇಶಕ್ಕೆ ಹೆಮ್ಮೆ ಹಾಗೂ ಸಂತಸದ ವಿಷಯ ಎನ್ನಬಹುದು.

cinibeat