ʻಮಲ್ಲಿಕಾಪುರಂʼ ಸಿನಿಮಾ ನಿರ್ದೇಶಕರ ಹೊಸ ಸಿನಿಮಾ ʻಸುಮತಿ ವಳವುʼ

- ಮಲಯಾಳಂನ ಸೂಪರ್ ಹಿಟ್ ಮಲ್ಲಿಕಾಪುರಂ ಚಿತ್ರ ನಿರ್ದೇಶಕರ ಹೊಸ ಸಿನಿಮಾ ಸುಮತಿ ವಳವು
- ವಾಟರ್ ಮ್ಯಾನ್ ಫಿಲಂಸ್, ಥಿಂಕ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ
ವಿಷ್ಣು ಶಶಿ ಶಂಕರ್ ನಿರ್ದೇಶನದ ಮಲಯಾಳಂ ಹಾರರ್-ಫ್ಯಾಂಟಸಿ ಸಿನಿಮಾ ಸುಮತಿ ವಲವು. ಅರ್ಜುನ್ ಅಶೋಕನ್ ಮತ್ತು ಮಾಳವಿಕಾ ಮನೋಜ್ ಮುಖ್ಯ ಪಾತ್ರಗಳಲ್ಲಿ ಈ ಸಿನಿಮಾದಲ್ಲಿದ್ದಾರೆ. ಅಭಿಲಾಷ್ ಪಿಳ್ಳೈ ಚಿತ್ರಕಥೆ ಬರೆದಿರುವ ಈ ಹಾರರ್ ಥ್ರಿಲ್ಲರ್ ಸಿನಿಮಾ ನವೆಂಬರ್ 30ರಿಂದ ಶೂಟಿಂಗ್ ಆರಂಭಿಸಿದೆ. ಈ ಹಿಂದೆ ಮಲಯಾಳಂನಲ್ಲಿ ಮಲ್ಲಿಕಾಪುರಂ ಸಿನಿಮಾ ನಿರ್ದೇಶನದ ಅನುಭವ ಹೊಂದಿರುವ ವಿಷ್ಣು ಶಶಿ ಇದೀಗ ಈ ವಿಶೇಷ ಸಿನಿಮಾದ ಜತೆಗೆ ಆಗಮಿಸುತ್ತಿದ್ದಾರೆ.

ವಾಟರ್‌ಮ್ಯಾನ್ ಫಿಲ್ಮ್ಸ್ ಎಲ್‌ಎಲ್‌ಪಿ, ಥಿಂಕ್ ಸ್ಟುಡಿಯೋಸ್‌ನ ಸಹಯೋಗದೊಂದಿಗೆ, ತನ್ನ ಮುಂಬರುವ ಚಿತ್ರ ಸುಮತಿ ವಲವು ಚಿತ್ರೀಕರಣದ ಪ್ರಾರಂಭವನ್ನು ಹೆಮ್ಮೆಯಿಂದ ಘೋಷಿಸುತ್ತದೆ. ಈ ಬಹು ನಿರೀಕ್ಷಿತ ಯೋಜನೆಯು ಭಯಾನಕ ಮತ್ತು ಹಾಸ್ಯದ ಅಂಶಗಳನ್ನು ಸಂಯೋಜಿಸುತ್ತದೆ, ಪ್ರೇಕ್ಷಕರಿಗೆ ರೋಮಾಂಚಕ ಮತ್ತು ನಗು ತುಂಬಿದ ಸಿನಿಮೀಯ ಅನುಭವವನ್ನು ನೀಡುತ್ತದೆ. ಚಿತ್ರವು ನವೆಂಬರ್ 30, 2024 ರಂದು ಅದರ ಚಿತ್ರೀಕರಣವನ್ನು ಪ್ರಾರಂಭಿಸಿತು, ಇದು ರೋಮಾಂಚಕಾರಿ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ.
ಹಾರರ್ ಕಾಮಿಡಿ ಸಿನಿಮಾ
ಸುಮತಿ ವಳವು ಸಿನಿಮಾ ಹಾರರ್ ಕಾಮಿಡಿ ಸಿನಿಮಾ. ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವಷ್ಟು ಕಥೆಯನ್ನು ಬಿಗಿಯಾಗಿ ಹೆಣೆಯಲಾಗಿದೆ ಎಂಬುದು ಚಿತ್ರತಂಡದ ಭರವಸೆಯ ಮಾತು. ವಾಟರ್‌ಮ್ಯಾನ್ ಫಿಲ್ಮ್ಸ್ ಎಲ್‌ಎಲ್‌ಪಿ ಮತ್ತು ಥಿಂಕ್ ಸ್ಟುಡಿಯೋಸ್‌ನ ಸಹಯೋಗದಲ್ಲಿ ಸುಮತಿ ವಳವು ಸಿನಿಮಾ ನಿರ್ಮಾಣವಾಗುತ್ತಿದೆ.

ತಾಂತ್ರಿಕ ಬಳಗ ಹೀಗಿದೆ…
ಸುಮತಿ ವಳವು ಸಿನಿಮಾದ ನಿರ್ದೇಶನದ ಚುಕ್ಕಾಣಿ ಹಿಡಿದವರು ಸೂಪರ್ ಹಿಟ್ ಮಲಿಕಪ್ಪುರಂ ಸಿನಿಮಾ ಮೂಲಕ ಮೆಚ್ಚುಗೆ ಪಡೆದ ನಿರ್ದೇಶಕ ವಿಷ್ಣು ಶಶಿ ಶಂಕರ್. ಮಲ್ಲಿಕಾಪುರಂ ಸೇರಿ ಕ್ಯಾಡವರ್ ಮತ್ತು ಆನಂದ್ ಶ್ರೀಬಾಲಾ ಸಿನಿಮಾಕ್ಕೂ ಕಥೆ ಬರೆದಿದ್ದ ಅಭಿಲಾಷ್ ಪಿಳ್ಳೈ ಸುಮತಿ ವಳವು ಚಿತ್ರಕ್ಕೂ ಕಥೆ ಬರೆದಿದ್ದಾರೆ. ಶಂಕರ್ ಪಿ.ವಿ ಅವರ ಛಾಯಾಗ್ರಾಹಣ, ರಂಜಿನ್ ರಾಜ್ ಸಂಗೀತ, ಶಫೀಕ್ ಮೊಹಮ್ಮದ್ ಅಲಿ ಸಂಕಲನ ಚಿತ್ರಕ್ಕಿದೆ. ಅಜಯ್ ಮಂಗಡ್ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.