Marali Manasagide: ಹೊಸ ಚಿತ್ರದ ಹಾಡುಗಳ ಬಿಡುಗಡೆ

ಮರಳಿ ಮನಸಾಗಿದೆ ಸಿನಿಮಾ ಬಹುತೇಕ ಕರಾವಳಿಯ ಕಲಾವಿದರನ್ನು ಒಳಗೊಂಡಿರುವ ಹಾಗೂ ಚಿತ್ರೀಕರಣ ಕೂಡ ಬಹುತೇಕ ಬಾಗ ಕರಾವಳಿ ಭಾಗದಲ್ಲೇ ಮುಗಿಸಿ ನಿರ್ಮಾಣವಾಗುತ್ತಿರುವ ಮನೋಜ್ಞ ಚಿತ್ರವಿದು.
ಚಿತ್ರದ ಏನಿದೆನು ಈ ಕಂಪನ ಹಾಡಿನ ಅದ್ದೂರಿ ಬಿಡುಗಡೆ ಕಾರ್ಯಕ್ರಮ ಉಡುಪಿಯ ಯಕ್ಷಗಾನ ಕಲಾರಂಗ ದಲ್ಲಿ ನಡೆಯಿತು.
ವಿಶೇಷವಾಗಿ ಕರಾವಳಿಯ ಪ್ರಕೃತಿ ಸೊಬಗಿನ ಸುಂದರ ತಾಣಗಳನ್ನು ಅತ್ಯಂತ ನವೀರಾಗಿ ಸೆರೆಹಿಡಿಯಲಾಗಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಪುತ್ತೂರಿನ ಅರ್ಜುನ್ ವೇದಾಂತ್ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ತುಳು, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಮರಳಿ ಮನಸಾಗಿದೆ ನನ್ನ ಬದುಕಿನ ಅದ್ಭುತ ಚಿತ್ರವಾಗಲಿದೆ ಎಂದರು. ನಿರೀಕ್ಷಾ ಶೆಟ್ಟಿ, ಹಾಗೂ ಸ್ಮೃತಿ ವೆಂಕಟೇಶ್, ನಾಯಕಿಯರು.
ಮೂಲತಃ ಕಾರ್ಕಳದವರೇ ಆಗಿರುವ ನಾಗರಾಜ್ ಶಂಕರ್ ಕಥೆ, ಚಿತ್ರಕಥೆ, ಸಂಭಾಷಣೆ,ನಿರ್ದೇಶನ ಹಾಗೂ ಮುದೇಗೌಡ್ರು ನವೀನ ಕುಮಾರ್ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದಲ್ಲಿ. ಸಂಗೀತ ವಿನು ಮನಸು, ಛಾಯಾಗ್ರಾಹನಾ ಹಾಲೇಶ್ ಎಸ್, ಸಂಕಲನ ಹರೀಶ್ ಕೊಮ್ಮೆ, ನೃತ್ಯ ನಿರ್ದೇಶನ ಹೈಟ್ ಮಂಜು ಇವರೆಲ್ಲರ ಸಮಾಗಮದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ.
ಚಿತ್ರದಲ್ಲಿನ ಸುಮಧುರ ಹಾಡುಗಳು (ಎದುರಿಗೆ ಬಂದರೆ ಹೃದಯಕೆ ತೊಂದರೆ, ಸುಳಿ ಮಿಂಚು, ಏನಿದೇನು ಈ ಕಂಪನ ) ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ಮೆಚ್ಚುಗೆ ಗಳಿಸಿ ಭರವಸೆ ಮೂಡಿಸಿದೆ. ಕಥೆ, ದೃಶ್ಯ, ಸಾಹಸ, ಸಾಹಿತ್ಯ, ಸಂಗೀತ ಎಲ್ಲವೂ ಸೊಗಸಾಗಿದ್ದು ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂಗಾರು ಮಳೆ ಚಿತ್ರದಂತೆ ಯಶಸ್ವಿಯಾಗಲಿದೆ ಎಂಬ ದೃಢ ವಿಶ್ವಾಸ ಚಿತ್ರ ವಿಮರ್ಶಕರದ್ದಾಗಿದೆ.
ಇದನ್ನೂ ಓದಿ | ಆದಿತ್ಯ ಈಗ ʼಟೆರರ್ʼ ಅವತಾರದಲ್ಲಿ ಬರಲಿದ್ದಾರೆ
ಭೋಜರಾಜ್ ವಾಮಂಜರು ಮಾತನಾಡುತ್ತಾ ಕಥೆಯೇ ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ನನ್ನ ಪಾತ್ರ ತುಂಬಾ ವಿಶೇಷವಾಗಿದೆ ಎರಡು ರೀತಿಯ ಪಾತ್ರಗಳನ್ನು ನಿಬಸಿದ್ದೇನೆ ಚಿತ್ರ ದೊಡ್ಡ ಮಟ್ಟದ ಗೆಲುವನ್ನು ಸಾದಿಸಲಿದೆ, ಚಿತ್ರ ತಂಡಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಈ ಚಿತ್ರದಲ್ಲಿ ಮತ್ತೊಂದು ಬಹುಮುಖ್ಯ ಪಾತ್ರವನ್ನು ಮಾಡಿರುವ ಕಾಂತಾರ ಚಿತ್ರದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಮಾನಸಿ ಸುಧೀರ್ ಮಾತನಾಡಿ ತುಂಬಾ ವರುಷಗಳ ನಂತರ ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತರಾಗಿ ಥಿಯೇಟರ್ ಗೆ ಹೋಗಿ ನೋಡುವಂತಹ ಒಂದೊಳ್ಳೆ ಅದ್ಭುತ ಸಿನಿಮಾವಾಗಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವನಿಸುರುಳಿ ಬಿಡುಗಡೆ ಮಾಡಿ ನಮ್ಮೂರಿನ ಕಲಾವಿದರಿಗೆ ಹಾಗೂ ಚಿತ್ರ ತಂಡಕ್ಕೆ ಕರಾವಳಿ ಜನತೆಯ ಬೆಂಬಲವಿರಲಿ. ಪ್ರೋತ್ಸಾಹವಿರಲಿ. ಚಿತ್ರದ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಮರಳಿ ಮನಸಾಗಿದೆ ಚಿತ್ರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಸಿನಿಮಾವು ಶತದಿನ ಆಚರಿಸುವಂತಾಗಲಿ ಎಂಬದಾಗಿ ಉಡುಪಿ ಶಾಸಕರಾದ ಶ್ರೀ ಯಶ್ ಪಲ್ ಸುವರ್ಣ ಹಾರೈಸಿದರು. ಕಾರ್ಯಕ್ರಮದಲ್ಲಿ ಭಾರತಿ ಶೆಟ್ಟಿ, ಮೋಹಿನಿ ನಾಯಕ್, ಗೀತಾಂಜಲಿ ಎಂ ಸುವರ್ಣ, ರೋಹನ್,ಆಶಿತ್ ಸುಬ್ರಹ್ಮಣ್ಯ,ವಿಜಯ ಕುಮಾರ್ ಉಪಸ್ಥಿತರಿದ್ದರು