ಪುಷ್ಪ 2 ಸಂಭಾವನೆ ಅಲ್ಲು ಅರ್ಜುನ್‌-3** ಕೋಟಿ, ರಶ್ಮಿಕಾ-1** ಕೋಟಿ, ಶ್ರೀಲೀಲಾ-2* ಕೋಟಿ

 ಪುಷ್ಪ 2 ಸಂಭಾವನೆ ಅಲ್ಲು ಅರ್ಜುನ್‌-3** ಕೋಟಿ, ರಶ್ಮಿಕಾ-1** ಕೋಟಿ, ಶ್ರೀಲೀಲಾ-2* ಕೋಟಿ

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಸುಮಾರು 3 ಗಂಟೆ 25 ನಿಮಿಷದ ಈ ಚಿತ್ರ ಬ್ಲಾಕ್ ಬಸ್ಟರ್ ಟಾಕ್ ಆಗಿದೆ. ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್​ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮೊದಲ ದಿನದ ಒಟ್ಟು ಕಲೆಕ್ಷನ್ 294 ಕೋಟಿ ಎಂದು ವರದಿಯಾಗಿದೆ. ಕೋಟಿ ಕೋಟಿ ಬಾಚುತ್ತಿರುವ ಈ ಸಿನಿಮಾವನ್ನು ಸುಮಾರು 400 ರಿಂದ 500 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಸೌಂಡ್ ಮಾಡ್ತಿರುವ ಬೆನ್ನಲ್ಲೇ, ಚಿತ್ರಕ್ಕೆ ಯಾರು ಎಷ್ಟು ಹಣ ಪಡೆದುಕೊಂಡಿದ್ದಾರೆ ಎಂಬ ಟಾಕ್ಸ್​ಗಳು ಶುರುವಾಗಿದೆ.

ವರದಿಗಳ ಪ್ರಕಾರ.. ಅಲ್ಲು ಅರ್ಜುನ್ 300 ಕೋಟಿ, ನಿರ್ದೇಶಕ ಸುಕುಮಾರನ್ 15 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ 10 ಕೋಟಿ ಪಡೆದರೆ, ಫಹಾದ್ ಫಾಜಿಲ್ 8 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್​ 5 ಕೋಟಿ ರೂಪಾಯಿ ಹಾಗೂ ಶ್ರೀಲೀಲಾಗೆ 2 ಕೋಟಿ ನೀಡಲಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 5 ರಂದು ವಿಶ್ವದಾದ್ಯಂತ ಪುಷ್ಪ 2 ಚಿತ್ರ ರಿಲೀಸ್ ಆಗಿದೆ.

cinibeat