ಮದುವೆ, ಮಕ್ಕಳಾದ್ಮೇಲೂ EXPOSE ಬೇಕಾ? ಶೃತಿ ಹರಿಹರನ್ ಗೆ ಮಹಿಳೆ ಕಮೆಂಟ್!!
ನಟಿ ಶೃತಿ ಹರಿಹರನ್ ಫಿಟ್ನೆಸ್ ಮೇಂಟೇನ್ ಮಾಡುವ ಸಲುವಾಗಿ ಜಿಮ್ ನಲ್ಲಿ ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಶೇರ್ ಮಾಡಿದ್ರು. ಶೃತಿ ಹರಿಹರನ್ ಜಿಮ್ ನಲ್ಲಿ ಬಳಸುವ ಉಡುಪುಗಳನ್ನ ಧರಿಸಿದ್ದರಿಂದ ಕೊಂಚ ಹಾಟ್ ಆಗಿಯೇ ಕಾಣುವಂತೆ ಇತ್ತು. ಈ ಪೋಸ್ಟ್ ನ ಫೋಟೋಗಳನ್ನು ನೋಡಿ ಅಪೂರ್ವ ಅನ್ನುವ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡಿದ್ದ ವ್ಯಕ್ತಿ ಒಬ್ಬ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ.
‘ಮದುವೆಯಾದ ಮೇಲೆ ಮಕ್ಕಳು ಗಂಡ ಅಂತ ಇರೋದು ಬಿಟ್ಟು, ಯಾಕೆ ಇತರ ಎಕ್ಸ್ಪೋಸ್ ಮಾಡ್ತೀಯಾ..’ ಅಂತ ಕಾಮೆಂಟ್ ಮಾಡಿದ್ದ. ಅಪೂರ್ವ ಗೌಡ ಅಂತಿದ್ದ ಇದ್ದ ಅಕೌಂಟ್ನ ನೋಡಿ ಇದು ಯಾರೋ ಮಹಿಳೆ ಕಮೆಂಟ್ ಮಾಡಿದ್ದಾರೆ ಎಂದು ತಿಳಿದು ಈ ಕಾಮೆಂಟ್ ನ ಸ್ಕ್ರೀನ್ ಶಾಟ್ ತೆಗೆದು ಅದಕ್ಕೆ ಉತ್ತರವನ್ನು ನೀಡಿದರು.
ಇಂಥ ಕಾಮೆಂಟ್ಗಳು ಒಬ್ಬ ಹೆಣ್ಣಿನಿಂದಲೇ ಬರುತ್ತವೆ ಅಂದ್ರೆ ದೇವರೇ ನಮ್ಮನ್ನು ಕಾಪಾಡಬೇಕು. ಅಪೂರ್ವ ನೀವು ಮತ್ತು ನಾವು ಖಂಡಿತವಾಗಿಯೂ ಒಮ್ಮೆ ಭೇಟಿ ಮಾಡಬೇಕು. ಸಾಕಷ್ಟು ವಿಷಯಗಳ ಬಗ್ಗೆ ಮಾತಾಡಬೇಕು. ಏನ್ ಹೇಳ್ತೀರಾ ಅಥವಾ ಇದು ಸುಮ್ಮನೆ ಸಮಯ ವ್ಯರ್ಥ ಅಂತೀರಾ? ಅಂತ ಪೋಸ್ಟ್ ಮಾಡಿದ್ರು. ನಂತ್ರ ಇದು ಯಾವುದೊ ಫೇಕ್ ಅಕೌಂಟ್ ಎಂದು ತಿಳಿದು, ಅದನ್ನು ಶೇರ್ ಮಾಡಿಕೊಂಡ್ರು. ಈಗ ಆ ಅಕೌಂಟೇ ಮಂಗ ಮಾಯಾ..