ದಿ ಗರ್ಲ್‌ಫ್ರೆಂಡ್‌: ಹೀರೋ, ಹೀರೋಯಿನ್‌ ಕನ್ನಡದವ್ರು, ಸಿನಿಮಾ ತೆಲುಗಿನಲ್ಲಿ

 ದಿ ಗರ್ಲ್‌ಫ್ರೆಂಡ್‌: ಹೀರೋ, ಹೀರೋಯಿನ್‌ ಕನ್ನಡದವ್ರು, ಸಿನಿಮಾ ತೆಲುಗಿನಲ್ಲಿ

ಪುಷ್ಪ 2: ದಿ ರೂಲ್‌ನ ಪ್ರಚಂಡ ಸಕ್ಸಸ್‌ನ ನಂತರ, ರಶ್ಮಿಕಾ ಮಂದಣ್ಣ ಈಗ ತನ್ನ ಮುಂದಿನ ಪ್ಯಾನ್‌ ಇಂಡಿಯಾ ಬಿಗ್‌ ಸಿನಿಮಾ ʻದಿ ಗರ್ಲ್‌ಫ್ರೆಂಡ್ʼ ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ, ದಿ ಗರ್ಲ್‌ ಫ್ರೆಂಡ್‌ ಟೀಸರ್ ಅನ್ನು ವಿಜಯ್ ದೇವರಕೊಂಡ ಅವರು ರಿಲೀಸ್‌ ಮಾಡಿದ್ದಾರೆ. ಸ್ಪೆಷಲ್‌ ಏನಪ್ಪ ಅಂದ್ರೆ ಈ ಟೀಸರ್‌ನಲ್ಲಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಅನ್ನ ಇಂಟ್ರಡ್ಯೂಸ್‌ ಮಾಡಿಕೊಡೋದೇ ವಿಜಯ್‌ ದೇವರಕೊಂಡ.

ದಿ ಗರ್ಲ್‌ ಫ್ರೆಂಡ್‌ ಟೀಸರ್ ವಿಜಯ್ ದೇವರಕೊಂಡ ಅವರ ಕಾವ್ಯಾತ್ಮಕ ಧ್ವನಿಯೊಂದಿಗೆ ಓಪನ್‌ ಆಗುತ್ತೆ. ಯೂತ್‌ ಸಿನಿಮಾ ಪ್ರೇಮಿಗಳ ಅಚ್ಚು ಮೆಚ್ಚಿನ ದೇವರಕೊಂಡ ವಾಯ್ಸ್‌ ಹೀರೋಯಿನ್‌ ಸೌಂದರ್ಯವನ್ನು ಹೊಗಳುತ್ತೆ, ಜೊತೆಗೆ ಆದರೆ ರಶ್ಮಿಕಾ ಕಾಲೇಜು ಲವ್‌ ಸ್ಟೋರಿ ಝಲಕ್ ​ತೆರೆಯ ಮೇಲೆ ತೆರೆದುಕೊಳ್ಳುತ್ತೆ. ಕಥೆಯ ಎಳೆಯನ್ನು ಬಿಟ್ಟಕೊಡದೇ ಹೋದರೂ, ರಶ್ಮಿಕಾ ಪಾತ್ರವು ಹೀರೋ ಪಾತ್ರದಲ್ಲಿ ಮಿಂಚಿರೋ ದೀಕ್ಷಿತ್ ಶೆಟ್ಟಿ ಅವರೊಂದಿಗಿನ ಕಾಂಪ್ಲಿಕೇಟೆಡ್‌ ರಿಲೇಶನ್‌ ಶಿಪ್‌ನ ಜೊತೆಗೆ ಹೋರಾಡ್ತಾರೆ ಅನ್ನೋ ಹಿಂಟ್‌ ಬಿಟ್ಟು ಕೊಟ್ಟಿದೆ. ಇದು ಕನ್ನಡದ ದಿಯಾ ಸಿನಿಮಾ ಇನ್ಸ್‌ಪೈರ್ಡ್‌ ಸ್ಟೋರಿ ಅನ್ನಿಸೋದ್ರಲ್ಲಿ ಡೌಟಿಲ್ಲ.

ದಿ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿ ಅನು ಇಮ್ಯಾನುಯೆಲ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್‌ನಡಿಯಲ್ಲಿ ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ನಿರ್ಮಿಸಿರುವ ಈ ಚಿತ್ರವನ್ನು ಅಲ್ಲು ಅರವಿಂದ್ ಪ್ರೆಸೆಂಟ್‌ ಮಾಡ್ತಾ ಇದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಸಿನಿಮಾ ರಿಲೀಸ್‌ ಡೇಟ್‌ ಶೀಘ್ರದಲ್ಲೇ ರಿವೀಲ್‌ ಆಗಲಿದೆ. ಹೆಮ್ಮೆಯ ವಿಷಯ ಅಂದ್ರೆ ಸಿನಿಮಾದ ನಾಯಕಿ ರಶ್ಮಿಕ ಕನ್ನಡದವ್ರು, ಹೀರೋ ದೀಕ್ಷಿತ್‌ ಶೆಟ್ಟಿ ಕನ್ನಡದವ್ರು ಆದ್ರೆ ಸಿನಿಮಾದ ನಿರ್ಮಾಪಕರು ತೆಲುಗಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಕಮ್‌ ನಟ ರಾಹುಲ್‌ ರವೀಂದ್ರನ್‌ ತಮಿಳು ಹಾಗು ತೆಲುಗಿನ ಫೇಮಸ್‌ ಡೈರೆಕ್ಟರ್‌.

cinibeat