ಪುಷ್ಪ-2 ಫಸ್ಟ್ ಡೇ ಕಲೆಕ್ಷನ್ 250+ ಕೋಟಿ! ಬಾಹುಬಲಿ-2,KGF-2, RRR ದಾಖಲೆ ಉಡೀಸ್
![ಪುಷ್ಪ-2 ಫಸ್ಟ್ ಡೇ ಕಲೆಕ್ಷನ್ 250+ ಕೋಟಿ! ಬಾಹುಬಲಿ-2,KGF-2, RRR ದಾಖಲೆ ಉಡೀಸ್](https://cinibeat.com/wp-content/uploads/2024/12/pushpa2-teaser-record-views-apr9-16x-850x560.jpg)
ಪುಷ್ಪ ರಾಜ್ನ ಮಾಸ್ ಜಾತ್ರೆ ಜೋರಾಗಿದೆ. ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿದೆ. ಪ್ರೀಮಿಯರ್ ಶೋಗಳಿಂದಲೇ ಚಿತ್ರ ಬ್ಲಾಕ್ ಬಸ್ಟರ್ ಪಡೆದುಕೊಂಡಿದೆ ಎಂಬ ಟಾಕ್ ಶುರುವಾಗಿತ್ತು. ಹೀಗಾಗಿ ಪುಷ್ಪ-2 ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಎಕ್ಸೈಟ್ಮೆಂಟ್ ಅಭಿಮಾನಿಗಳದ್ದಾಗಿದೆ. ಮುಂಗಡ ಬುಕ್ಕಿಂಗ್ ಮೂಲಕವೇ 100 ಕೋಟಿ ಕಲೆಕ್ಷನ್ ಮಾಡಿದ್ದ ಪುಷ್ಪ 2, ಬಿಡುಗಡೆಯಾದ ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ.
ಪ್ರೀಮಿಯರ್ ಶೋ ಮೂಲಕ ಚಿತ್ರ 100 ಕೋಟಿ ರೂಪಾಯಿ ಗಳಿಸಿತ್ತು. ಡಿಸೆಂಬರ್ 5 ರಂದು ಈ ಚಿತ್ರವು ಭಾರತದಲ್ಲಿ 165 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 175 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಒಟ್ಟು 250 ಕೋಟಿ ರೂಪಾಯಿ ಗಳಿಸಿರುವ ಸಾಧ್ಯತೆ ಇದೆ.
ಭಾರತದಲ್ಲಿ RRR ಚಿತ್ರ ಮೊದಲ ದಿನ 133 ಕೋಟಿ ರೂಪಾಯಿ ಗಳಿಸಿತ್ತು. ಬಾಹುಬಲಿ 121 ಕೋಟಿ, ಕೆಜಿಎಫ್-2 116 ಕೋಟಿ ರೂಪಾಯಿ ಗಳಿಸಿತ್ತು. ಈ ಎಲ್ಲಾ ದಾಖಲೆಗಳನ್ನು ಪುಷ್ಪ-2 ಮುರಿದಿದೆ. ಇನ್ನು ಪುಷ್ಪ 2 ಚಿತ್ರವು ಹೈದರಾಬಾದ್ನಲ್ಲಿ 1549 ಪ್ರದರ್ಶನ ಕಂಡಿದೆ. ಕರ್ನಾಟಕದಲ್ಲಿ ಸುಮಾರು 1072 ಶೋಗಳು ಮತ್ತು ಚೆನ್ನೈನಲ್ಲಿ 244 ಶೋಗಳು ಆಗಿದೆ.
ಮೊದಲ ದಿನದ ಕಲೆಕ್ಷನ್ 175 ಕೋಟಿಯಲ್ಲಿ ತೆಲುಗು ಅವತರಣಿಕೆಯಿಂದ 95.1 ಕೋಟಿ, ಹಿಂದಿಯಿಂದ 67 ಕೋಟಿ, ತಮಿಳಿನಿಂದ 7 ಕೋಟಿ, ಮಲಯಾಳಂನಿಂದ 5 ಕೋಟಿ, ಕನ್ನಡದಿಂದ 1 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಈ ಕಲೆಕ್ಷನ್ ಹೆಚ್ಚಾಗಲಿದೆ.