‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ಸಾಥ್ ಕೊಟ್ಟ ‘ಭಜರಂಗಿ’! ರಾಜ್ ಬಿ ಶೆಟ್ಟಿಗೆ ಶಿವಣ್ಣ ಚಮಕ್ ಕೊಟ್ಟಿದ್ದೇಗೆ ನೋಡಿ?

 ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ಸಾಥ್ ಕೊಟ್ಟ ‘ಭಜರಂಗಿ’! ರಾಜ್ ಬಿ ಶೆಟ್ಟಿಗೆ ಶಿವಣ್ಣ ಚಮಕ್ ಕೊಟ್ಟಿದ್ದೇಗೆ ನೋಡಿ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್‌ನ ‘ಭಜರಂಗಿ 2’ ಸಿನಿಮಾ ಜೀ5 ಒಟಿಟಿಯಲ್ಲಿ ಕಮಾಲ್ ಮಾಡ್ತಿದೆ. ಈ ಸಿನಿಮಾ ಬೆನ್ನಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಕನ್ನಡಿಗ’ ಸಿನಿಮಾಗೂ ಒಟಿಟಿಯಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಜೀ5 ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ.

ನವೆಂಬರ್ 19ರಂದು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಟ್ಟಿತ್ತು. ರಿಷಬ್ ಹಾಗೂ ರಾಜ್ ಕಾಂಬಿನೇಷನ್ ಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ಪ್ರೇಕ್ಷಕರು ಮೆಚ್ಚಿದ್ದ ವಿಭಿನ್ನ ಬಗ್ಗೆಯ ಈ ಸಿನಿಮಾದ ಒಟಿಟಿ ಹಕ್ಕು ಜೀ5 ಖರೀದಿ ಮಾಡಿತ್ತು. ಅದರಂತೆ ಸಂಕ್ರಾಂತಿ ಹಬ್ಬದ ಶುಭ ದಿನದಂದೂ ಅಂದ್ರೆ ಜನವರಿ 13ರಂದು ಜೀ5 ಅಂಗಳಕ್ಕೆ ರಿಷಬ್ ಹಾಗೂ ರಾಜ್ ಸಿನಿಮಾ ‘ಗರುಡ ಗಮನ ವೃಷಭ ವಾಹನ’ ಲಗ್ಗೆ ಇಡ್ತಿದೆ. ಹೀಗಾಗಿ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

ಶಿವಣ್ಣ ನಟನೆಯ ಭಜರಂಗಿ-2 ಸಿನಿಮಾ ಜೀ5 ಒಟಿಟಿಯಲ್ಲಿ ಮೋಡಿ ಮಾಡ್ತಿದ್ದು, ಈಗ ‘ಗರುಡ ಗಮನ ವೃಷಭ ವಾಹನ’ ಜೀ5ನಲ್ಲಿ ಬಿಡುಗಡೆಯಾಗ್ತಿರುವ ವಿಷ್ಯ ಕೇಳಿ ಶಿವಣ್ಣ ರಾಜ್ ಬಿ ಶೆಟ್ಟಿ ಕರೆ ಮಾಡಿ ವಿಷ್ ಮಾಡಿದ್ದಾರೆ. ಅದಕ್ಕೂ ಮುನ್ನ ಶಿವಣ್ಣ ರಾಜ್ ಗೆ ಚಮಕ್ ಕೊಟ್ಟಿದ್ದಾರೆ. ಮಂಗಳೂರಿನ ಭಾಷೆಯಲ್ಲಿ ತಮಾಷೆಯಾಗಿ ಅವಾಜ್ ಹಾಕಿ ನಾನು ಭಜರಂಗಿ ಅಂತಾ ಮಾತಾಡಿದ್ದಾರೆ. ನಿಮ್ಮ ಸಿನಿಮಾ ಜೀ5 ಒಟಿಟಿಗೆ ಬರ್ತಿರೋದಕ್ಕೆ ಶುಭಾಶಯ.. ರಾಜ್ ನಿಮ್ಮ ಆಕ್ಟಿಂಗ್ ಸೂಪರ್ ಎಂದಿದ್ದಾರೆ ಕನ್ನಡ ಚಿತ್ರರಂಗದ ಲೀಡರ್..

ಸದಾ ಹೊಸಬರ ಸಿನಿಮಾಗಳು.. ಚಿತ್ರರಂಗಕ್ಕೆ ಸಾಥ್ ಕೊಡುವ ಶಿವಣ್ಣ ರಾಜ್ ಬಿ ಶೆಟ್ಟಿ ‘ಗರುಡ ಗಮನ ವೃಷಭ ವಾಹನ’ಗೂ ಸಾಥ್ ಕೊಟ್ಟಿದ್ದಾರೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ತಿರುವ ಜೀ5 ಈಗ ವಿಭಿನ್ನ ಬಗೆಯ ಸಿನಿಮಾ ‘ಗರುಡ ಗಮನ ವೃಷಭ ವಾಹನ’ವನ್ನು ಪ್ರೇಕ್ಷಕರ ಎದುರು ತರುತ್ತಿದೆ.

cinibeat

Leave a Reply

Your email address will not be published. Required fields are marked *