“ಚಿನ್ನದ ಮಲ್ಲಿಗೆ ಹೂವೇ” ಚಿತ್ರದ ಮೂಲಕ ನಿರ್ಮಾಪಕಿಯಾದ ನಿರ್ದೇಶಕಿ!

 “ಚಿನ್ನದ ಮಲ್ಲಿಗೆ ಹೂವೇ” ಚಿತ್ರದ ಮೂಲಕ ನಿರ್ಮಾಪಕಿಯಾದ ನಿರ್ದೇಶಕಿ!

ಸಿನಿಬೀಟ್ ಸುದ್ದಿ:

ನವಿಲುಗರಿ ನವೀನ್ ಪಿ.ಬಿ ನಿರ್ದೇಶನದ ಈ ಚಿತ್ರಕ್ಕೆ ಷಣ್ಮುಖ ಗೋವಿಂದರಾಜ್ ನಾಯಕ. ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ “ಸಾರಾ ವಜ್ರ” ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕಿ ಆರ್‍ನಾ ಸಾಧ್ಯ ಈಗ ನಿರ್ಮಾಪಕಿಯಾಗಿದ್ದಾರೆ.

ಇದನ್ನೂ ಓದಿ: ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಗಿಚ್ಚಿ ಗಿಲಿಗಿಲಿ ಜಾಹ್ನವಿ- ರಾಕ್ ಸ್ಟಾರ್ ರೂಪೇಶ್ ಶೆಟ್ಟಿಗೆ ಜೋಡಿ…


ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯ ಮೂಲಕ “ಚಿನ್ನದ ಮಲ್ಲಿಗೆ ಹೂವೇ” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟರು. ನಟ ಡಾ||ರಾಘವೇಂದ್ರ ರಾಜಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು.

ಇದನ್ನೂ ಓದಿ:ಗ್ರ್ಯಾಂಡ್ ಲಾಂಚ್ ಆದ ‘ಸಂಜು ವೆಡ್ಸ್ ಗೀತಾ ಸೀಕ್ವೆಲ್’!

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಡಾ||ರಾಜಕುಮಾರ್ ಮೊಮ್ಮಗ (ಲಕ್ಷ್ಮೀ ಹಾಗೂ ಗೋವಿಂದರಾಜ್ ಅವರ ಪುತ್ರ) ಷಣ್ಮುಖ ಗೋವಿಂದರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ನಾಗೇಂದ್ರ ಪ್ರಸಾದ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರಗಳ ಆಡಿಷನ್ ನಡೆಯುತ್ತಿದೆ. ಪ್ರಣವ್ ಸತೀಶ್ “ಚಿನ್ನದ ಮಲ್ಲಿಗೆ ಹೂವೇ”ಗೆ ಸಂಗೀತ ನೀಡುತ್ತಿದ್ದು, ಮಧು ತುಂಬಕೆರೆ ಅವರ ಸಂಕಲನವಿರಲಿದೆ.

cinibeat