ಕಪಿಲ್ ಸಿನಿಮಾ ಕೆರಿಯರ್ ಅಕಾಡೆಮಿ ; 100 ದಿನಗಳ ತರಬೇತಿ ಶಿಬಿರ.

 ಕಪಿಲ್ ಸಿನಿಮಾ ಕೆರಿಯರ್ ಅಕಾಡೆಮಿ ; 100 ದಿನಗಳ ತರಬೇತಿ ಶಿಬಿರ.

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನೃತ್ಯನಿರ್ದೇಶಕನಾಗಿ, ಚಲನಚಿತ್ರ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿರುವ ಕಪಿಲ್ ಎಂ.ಆರ್. ಈಗ 100 ದಿನಗಳ ಸಿನಿಮಾ ತರಬೇತಿ ಶಿಬಿರವನ್ನು ಪ್ರಾರಂಭಿಸುತ್ತಿದ್ದಾರೆ. ‘ಕಪಿಲ್ ಸಿನಿಮಾ ಕೆರಿಯರ್ ಅಕಾಡೆಮಿ’ ಬೆಂಗಳೂರಿನ ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆಯಲ್ಲಿನ ನಾಗ್ ಆರ್ಟ್ಸ್ ಕಚೇರಿಯಲ್ಲಿ ದಿನಾಂಕ 16. 10. 2023 ರಿಂದ ಈ ತರಬೇತಿ ಶಾಲೆಯು ಪ್ರಾರಂಭವಾಗುತ್ತಿದೆ.


ನೂರು ದಿನಗಳ ಕಾಲ‌ ನಡೆಯುವ ಈ ತರಬೇತಿ ಶಿಬಿರದಲ್ಲಿ ಸಿನಿಮಾ ಅಭಿನಯ, ನೃತ್ಯ, ಮತ್ತು ಸಾಹಸ ಇತ್ಯಾದಿಗಳನ್ನು ಕಲಿಸಿ, ಮುಂದಿನ ಹೊಸ ಚಿತ್ರದಲ್ಲಿ ನಟಿಸಲು ನೇರ ಪ್ರವೇಶ ನೀಡಲಾಗುತ್ತದೆ.

ಚಲನಚಿತ್ರ ನಿರ್ದೇಶಕರಾದ ವಿ.ನಾಗಪ್ಪ ಅವರು ಈ ಶಾಲೆಯ ಪ್ರಾಂಶುಪಾಲರಾಗಿದ್ದು, ಸಂಗೀತ ನಿರ್ದೇಶಕರಾದ ಗೋಪಿ ಕಲಾಕಾರ್ ತರಬೇತಿ ನೀಡಲಿದ್ದಾರೆ.
ಸ್ಥಳ :ನಂ ಸಿ.56 , ಕನ್ನಡ ಶಾಶ್ವತ ಸಾಮ್ರಾಜ್ಯ
ದೇವರಾಜ ಅರಸ್ ಟ್ರಕ್ ಟರ್ಮಿನಲ್,
ಕಂಠೀರವ ಸ್ಟುಡಿಯೋ ಮುಖ್ಯ ರಸ್ತೆ ,ಬೆಂಗಳೂರು
560022, ಮೊಬೈಲ್ ನಂ. 9902854165, ಜಿಮೇಲ್: kapilmaster56@gmail.com

cinibeat