ಸಿದ್ದಾರ್ಥ್ ಟ್ವೀಟು, ನೆಟ್ಟಿಗರ ಏಟು! ಜೈಲಿಗೆ ಹೆದರಿ ಸೈನಾ ಬಳಿ ಸಿದ್ದಾರ್ಥ್ ಕ್ಷಮೆ

 ಸಿದ್ದಾರ್ಥ್ ಟ್ವೀಟು, ನೆಟ್ಟಿಗರ ಏಟು! ಜೈಲಿಗೆ ಹೆದರಿ ಸೈನಾ ಬಳಿ ಸಿದ್ದಾರ್ಥ್ ಕ್ಷಮೆ

ನಟ ಸಿದ್ದಾರ್ಥ್ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್ ಸೇರ್ಪಡೆ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಅವಹೇಳನಕಾರಿಯಾಗಿ ಮಾಡಿದ್ದ ಟ್ವೀಟ್. ಹೌದು, ಕೆಲ ದಿನಗಳ ಹಿಂದಷ್ಟೇ ಭಾರತದ ಪ್ರಧಾನ ನರೇಂದ್ರ ಮೋದಿಯವರು ಪಂಜಾಬ್‍ಗೆ ತೆರಳಿದ್ದ ಸಂದರ್ಭದಲ್ಲಿ ಭದ್ರತಾ ವೈಫಲ್ಯ ಸಂಭವಿಸಿತ್ತು. ಆ ಬಗ್ಗೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದರು.

ಆದರೆ ಆ ಟ್ವೀಟ್‍ಗೂ ತಮಗೂ ಸಂಬಂಧ ಇಲ್ಲದಿದ್ದರೂ ಸೈನ್ ನೆಹ್ವಾಲ್ ಅವರ ಟ್ವೀಟ್‍ಗೆ ನಟ ಸಿದ್ದಾರ್ಥ್ ಪ್ರತಿಕ್ರಿಯೆ ನೀಡಿದ್ದರು. ಡಬಲ್ ಮೀನಿಂಗ್ ಇರುವಂತೆ ಪದಗಳನ್ನು ಉಪಯೋಗಿಸಿದ್ದರು. ಇದು ಭಾರತದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಂತ ಜಗ್ಗದ ಸಿದ್ದಾರ್ಥ್ ತಾನೇನೂ ಕೆಟ್ಟ ಪದಗಳನ್ನು, ಡಬಲ್ ಮೀನಿಂಗ್‍ನಲ್ಲಿ ಬಳಸಿಲ್ಲ ಅಂತ ಮತ್ತೊಮ್ಮೆ ತಮ್ಮ ಟ್ವೀಟ್‍ಅನ್ನು ಸಮರ್ಥಿಸಿಕೊಂಡು ಅಸಹ್ಯಕರ ಬುದ್ದಿಯನ್ನು ಮತ್ತೆ ತೋರಿಸಿದ್ದರು. ಆ ಬಳಿಕ ದೇಶಾದ್ಯಂತ ಅವರ ವಿರುದ್ಧ ಆನ್‍ಲೈನ್ ಕ್ಯಾಂಪೇನ್‍ಗಳು, ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಖುದ್ದು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಬೇಸರ ವ್ಯಕ್ತಪಡಿಸಿದ್ದರು.

ಮಾತ್ರವಲ್ಲದೇ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು. ಹೀಗಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧುಕ್ಷೆ ರೇಖಾ ಶರ್ಮಾ. ತಮಿಳುನಾಡು ಡಿಜಿಪಿಗೆ ಪತ್ರಮುಖೇನ ನಟ ಸಿದ್ದಾರ್ಥ್ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಮಾತ್ರವಲ್ಲದೇ ಟ್ವಿಟರ್ ಕಂಪನಿಗೂ ಸಿದ್ದಾರ್ಥ್ ಟ್ವಿಟರ್ ಅಕೌಂಟ್‍ಅನ್ನು ಬ್ಲಾಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಮಾತ್ರವಲ್ಲ ಸೈನಾ ನೆಹ್ವಾಲ್ ಕುಟುಂಬದವರೂ ಸಹ ಸಿದ್ದಾರ್ಥ್ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.

ಈ ಎಲ್ಲ ಬೆಳವಣಿಗೆಗಳನ್ನು ಮನಗಂಡ ಸಿದ್ದಾರ್ಥ್ ಹೀಗೇ ಬಿಟ್ಟರೆ ಜೈಲಿಗೆ ಹೋಗಿ ಕಂಬಿ ಎಣಿಸಬೇಕಾಗುತ್ತೆ, ಒಂದು ಟ್ವೀಟ್‍ನಿಂದ ಮುದ್ದೆ ಮುರೀಬೇಕಾಗುತ್ತೆ ಅಂತ ಆಲೋಚನೆ ಮಾಡಿದ್ದಾರೆ. ತಕ್ಷಣ ಸೈನಾ ನೆಹ್ವಾಲ್‍ರಿಗೆ ಮಾಡಿದ್ದ ಅಶ್ಲೀಲ ಟ್ವೀಟ್‍ಗಳನ್ನು ಡಿಲೀಟ್ ಮಾಡಿದ್ದಾರೆ. ಜತೆಗೆ ಓಪನ್ ಲೆಟರ್ ಮೂಲಕ ಸೈನಾ ಬಳಿ ಕ್ಷಮೆ ಯಾಚಿಸಿದ್ದಾರೆ. `ನಾನು ಕೆಲ ದಿನಗಳ ಹಿಂದೆ ನಿಮ್ಮ ಟ್ವೀಟ್‍ಗೆ ಪ್ರತಿಕ್ರಿಯೆ ಮಾಡುತ್ತಾ ಅಸಭ್ಯವಾಗಿ ತಮಾಷೆ ಮಾಡಿದ್ದೆ, ಅದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ. ನೀವು ನಂಬುವ ವಿಷಯಗಳನ್ನು ನಾನು ನಂಬದೇ ಇರಬಹುದು, ಆದರೆ ಆ ಸಿಟ್ಟು, ಕೋಪ, ಅಸಹನೆಯನ್ನು ಅಸಭ್ಯವಾದ ಮಾತುಗಳ ಮೂಲಕ ವಿರೋಧಿಸಿ, ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಅದನ್ನೂ ಮೀರಿದ ವ್ಯಕ್ತಿತ್ವ ನನ್ನದು. ಹೌದು ನಾನು ಮಾಡಿದ ತಮಾಷೆ ಸರಿಯಾದ ರೀತಿಯಾಗಿರಲಿಲ್ಲ. ಒಬ್ಬ ಹೆಣ್ಣು ಅಂತ ನಾನು ನಿಮ್ಮ ಬಗ್ಗೆ ಹಾಗೆ ಮಾತನಾಡಿಲ್ಲ. ಈ ವಿಷಯವನ್ನು ಇಲ್ಲಿಗೇ ಬಿಡೋಣ. ಯಾವತ್ತೂ ನೀವೇ ನನ್ನ ಚಾಂಪಿಯನ್’ ಎಂದು ನಟ ಸಿದ್ದಾರ್ಥ್, ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಳಿ ಕ್ಷಮೆ ಕೇಳಿದ್ದಾರೆ.

cinibeat