ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ “ಒನ್ ಅಂಡ್ ಓನ್ಲಿ ಸುಖ” ಎಂಬ ಹಾಡನ್ನು ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ಈ ಚಿತ್ರ ಶ್ರೀಘ್ರದಲ್ಲೇ ತೆರೆಗೆ ಬರಲಿದೆ. ತಂದೆ […]Read More
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಬಹಳ ಕಡಿಮೆ. ಈಗ ಆ ಸಾಲಿಗೆ ಸಾನ್ವಿಕ ಸೇರ್ಪಡೆಯಾಗಿದ್ದಾರೆ. ಕೇರಳ ರಾಜ್ಯದವರಾದ ಸಾನ್ವಿಕ ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ಕನ್ನಡದಲ್ಲಿ ಮಾಡಿರುವುದು ವಿಶೇಷ. ನಿರ್ದೇಶನ ಮಾತ್ರ ಅಲ್ಲ. ನಿರ್ಮಾಪಕಿ, ನಾಯಕಿ, ಸಾಹಸ ನಿರ್ದೇಶಕಿ ಹೀಗೆ ಒಂಭತ್ತು ಆಯಾಮಾಗಳಲ್ಲಿ ಸಾನ್ವಿಕ ಕೆಲಸ ಮಾಡಿದ್ದಾರೆ. ಅಜಯ್ ವರ್ಧನ್ ಈ ಚಿತ್ರದ ನಾಯಕರಾಗಿ ನಟಿಸಿದ್ದು, ಇತ್ತೀಚೆಗ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ನೆರವೇರಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಜಾವ ಕಾಫಿ” ಚಿತ್ರ […]Read More
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ಚಿತ್ರ “ಸೈನೈಡ್”. ಅಕ್ಷಯ್ ಕ್ರಿಯೇಷನ್ಸ್ ನಲ್ಲಿ ಕೆಂಚಪ್ಪ ಗೌಡ ಹಾಗೂ ಎಸ್ ಇಂದುಮತಿ ನಿರ್ಮಿಸಿದ್ದ, AMR ರಮೇಶ್ ನಿರ್ದೇಶಿಸಿದ್ದ ಹಾಗೂ ತಾರಾ, ರಂಗಾಯಣ ರಘು, ರವಿಕಾಳೆ, ಮಾಳವಿಕ, ಅವಿನಾಶ್, ಉಷಾ ಭಂಡಾರಿ ಮುಂತಾದವರು ಅಭಿನಯಿಸಿದ್ದ “ಸೈನೈಡ್” ಚಿತ್ರ 2006 ರಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗಿತ್ತು. ಈಗ ಇಪ್ಪತ್ತು ವರ್ಷಗಳ ಬಳಿಕ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ದೇಶಕ AMR ರಮೇಶ್ ನಿರ್ದೇಶಿಸಿದ್ದಾರೆ. ಈ ಕುರಿತು […]Read More
ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಎಸ್ ಎಸ್ ರಾಜಮೌಳಿಯವರು ಕ್ಲ್ಯಾಪ್ ಮಾಡಿ ಕಿರೀಟಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು. ಇದೀಗ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕಿರೀಟಿ ನಾಯಕನಾಗಿ ಚಿತ್ರರಂಗಕ್ಕೆ ಚೊಚ್ಚಲ ಹೆಜ್ಜೆ ಇಟ್ಟಿರುವ ಜೂನಿಯರ್ ಸಿನಿಮಾ ತೆರೆಗೆ ಬರುವ ದಿನಾಂಕ ನಿಗದಿಯಾಗಿದೆ. ಜುಲೈ 18ಕ್ಕೆ ಜೂನಿಯರ್ ಚಿತ್ರ ಬೆಳ್ಳಿಪರದೆ ಅಖಾಡಕ್ಕೆ ಇಳಿಯುತ್ತಿದೆ. ಪಂಚ ಭಾಷೆಯಲ್ಲಿ ರಿಲೀಸ್:ಕಿರೀಟಿ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, […]Read More
’ಟಕೀಲಾ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಕೆ.ಪ್ರವೀಣ್ನಾಯಕ್. ಇವರು ಈ ಹಿಂದೆ ’ಜಡ್’ ’ಹೂ ಅಂತಿಯಾ ಉಹೂ ಅಂತೀಯ’ ಹಾಗೂ ’ಮೀಸೆ ಚಿಗುರಿದಾಗ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ’ವಿದ್ಯಾರ್ಥಿ’ ’ಮುನಿಯ’ ’ಜನ್ಧನ್’ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಮರಡಿಹಳ್ಳಿ ನಾಗಚಂದ್ರ ಹೊಸ ಅನುಭವ ಎನ್ನುವಂತೆ, ಈ ಬಾರಿ ಶ್ರೀ ಸಿದ್ದಿವಿನಾಯಕ ಫಿಲಂಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ರಾಮರೆಡ್ಡಿ ಸಹ ನಿರ್ಮಾಪಕರು. ಧರ್ಮಕೀರ್ತಿರಾಜ್ ನಾಯಕ, ನಿಖಿತಾಸ್ವಾಮಿ ನಾಯಕಿ. ತಾರಗಣದಲ್ಲಿ ನಾಗೇಂದ್ರಅರಸ್, […]Read More
ಪೀಟರ್ ಸಿನಿಮಾ ತನ್ನ ಕಂಟೆಂಟ್ ಮೂಲಕ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಹಾಡುಗಳ ಮೇಲೆ ನಿರೀಕ್ಷೆ ಕೂಡ ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಮಲಯಾಳಂ ಗಾಯಕ ಪ್ರಣವಂ ಸಸಿಯಿಂದ ಹಾಡು ಹಾಡಿಸಿದ್ದ ಚಿತ್ರತಂಡವೀಗ ಮತ್ತೊಂದು ಹಾಡಿಗೆ ಬಾಲಿವುಡ್ ಗಾಯಕರನ್ನು ಕರೆಸಿದೆ. ಪೀಟರ್ ಗಾಗಿ ಬಾಲಿವುಡ್ ಖ್ಯಾತ ಗಾಯಕ ಹಾಗೂ ನಿರ್ದೇಶಕ ಅಜಯ್ ಗೋಗವಾಲೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಿಂದಿಯ ಪ್ರಭಾಸ್ ನಟನೆಯ ಆದಿ ಪುರುಷ್, ಅಮೀರ್ ಖಾನ್ ನಟನೆಯ ಪೀ ಕೆ , ಶಾರುಖ್ ನಟನೆಯ ಝೀರೋ ಮತ್ತು […]Read More
ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಸದಾಭಿರುಚಿ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ಅದರ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಪಬ್ಬಾರ್. ಗೀತಾ ಪಿಕ್ಚರ್ಸ್ ನಾಲ್ಕನೇ ಕೊಡುಗೆ ಪಬ್ಬಾರ್ ಸಿನಿಮಾದ ಮುಹೂರ್ತ ಬೆಂಗಳೂರಿನ ವೀರಾಂಜನೇಯ ದೇಗುಲದಲ್ಲಿ ನೆರವೇರಿದೆ. ವಾಣಿಜ್ಯ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕೆವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು , ನೆನಪಿರಲಿ ಪ್ರೇಮ್ ಕ್ಯಾಮೆರಾಗೆ ಚಾಲನೆ ಕೊಟ್ಟರು. ಧೀರೆನ್ ನಾಯಕನಾಗಿ ನಟಿಸುತ್ತಿರುವ ಪಬ್ಬಾರ್ ಚಿತ್ರಕ್ಕೆ ಶಾಖಾಹಾರಿ ಸಾರಥಿ ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ […]Read More
ಚಂದನವನದ ಹಿರಿಯ ನಟ ಡಿಂಗ್ರಿ ನಾಗರಾಜ್ ರವರ ಸುಪುತ್ರ ನಟ ರಾಜವರ್ಧನ್ ಈಗ ನಿರ್ಮಾಪಕರಾಗಿ ಹೆಜ್ಜೆ ಇಡುತ್ತಿದ್ದಾರೆ. ನಗರದ ಜಿಟಿ ಮಾಲ್ ನಲ್ಲಿರುವ MMB Legacy ಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಸಾಲು ಸಾಲಾಗಿ ಚಿತ್ರ ಮಾಡಲು ಸಿದ್ಧರಾಗಿದ್ದು , “ಜಾವಾ” ಎಂಬ ಚಿತ್ರದ ಟೈಟಲ್ ರಿವಿಲ್ ಮಾಡಲಾಯಿತು. ಈ ಚಿತ್ರವನ್ನು ಪತ್ರಕರ್ತ ಹಾಗೂ ಬರಹಗಾರರಾದ ದೇವಾ ಚಕ್ರವರ್ತಿ ನಿರ್ದೇಶನ ಮಾಡ್ತಿದ್ದು, ನಟರಾಗಿ ಮ್ಯಾಸಿವ್ ಹೀರೋ ರಾಜವರ್ಧನ್ ನಾಯಕನಾಗಿ […]Read More
ನಮ್ಮ ಸುತ್ತಮುತ್ತ ಅದೆಷ್ಟೋ ಕಥೆಗಳು ಇರುತ್ತವೆ. ಅದೆಷ್ಟೋ ವಿಚಿತ್ರ ಕ್ಯಾರೆಕ್ಟರ್ ಗಳು ಇರ್ತಾರೆ. ಆ ಕ್ಯಾರೆಕ್ಟರ್ ಗಳನ್ನೆ ಇಟ್ಟುಕೊಂಡು ಸಿನಿಮಾ ಮಾಡಿದಾಗ ಸಾಕಷ್ಟು ಜನರನ್ನ ತಲುಪಲಿದೆ. ಅಂಥದ್ದೊಂದು ಕಥೆಯನ್ನ ಹೊತ್ತು ಬರ್ತಾ ಇರೋದೆ ರಾಜರತ್ನಾಕರ ಸಿನಿಮಾ. ಈ ಸಿನಿಮಾದಲ್ಲಿ ಬೆಂಗಳೂರಿನ ಮಧ್ಯಮ ವರ್ಗದವರ ಕಥೆಯನ್ನ ಒಳಗೊಂಡಿದೆ. ದುರಹಂಕಾರಿಯೊಬ್ಬನ ಕಥೆ. ಸೋಮಾರಿತನದಿಂದ ಬಂದಂತ ದುರಹಂಕಾರದ ಪರಮಾವಧಿ. ಆದರೆ ಮುಂದೆ ಆತ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂಬ ಕಥೆಯನ್ನ ರಾಜರತ್ನಕರದಲ್ಲಿ ತೋರಿಸಿಲಾಗಿದೆ. ಈ ರೀತಿಯ ಕ್ಯಾರೆಕ್ಟರ್ ಹಲವು ಮನೆಗಳಲ್ಲಿ ಇರಬಹುದು. […]Read More
ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ಸಿನಿಪ್ರಿಯರ ಮನ-ಗಮನ ಸೆಳೆದಿದ್ದ ನಟಿ ರಾಗಿಣಿ ದ್ವಿವೇದಿ, ಈಗ ನಿಧಾನವಾಗಿ ಕಂಟೆಂಟ್ ಆಧರಿತ ಸಿನಿಮಾಗಳತ್ತ ಒಲವು ತೋರುತ್ತಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಬಯಸುತ್ತಿರುವ ರಾಗಿಣಿ ದ್ವಿವೇದಿ, ಈಗ ಅಂಥದ್ದೇ ಒಂದು ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ರಾಗಿಣಿ ದ್ವಿವೇದಿ ನಾಯಕಿಯಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಹೆಸರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’. ಕೆಲ ದಿನಗಳ ಹಿಂದಷ್ಟೇ ಈ […]Read More