ಗೋಲ್ಡನ್​ ಮ್ಯಾನ್​ ಆದರು ಕಾರ್ತಿ! ಹುಟ್ಟುಹಬ್ಬಕ್ಕೆ ‘ಜಪಾನ್’ ಕ್ಯಾರೆಕ್ಟರ್ ಟೀಸರ್ ಉಡುಗೊರೆ.

 ಗೋಲ್ಡನ್​ ಮ್ಯಾನ್​ ಆದರು ಕಾರ್ತಿ! ಹುಟ್ಟುಹಬ್ಬಕ್ಕೆ ‘ಜಪಾನ್’ ಕ್ಯಾರೆಕ್ಟರ್ ಟೀಸರ್ ಉಡುಗೊರೆ.
ಜಪಾನ್​ ಚಿತ್ರದ ಹೊಸ ಪೋಸ್ಟರ್​

ತಮಿಳು ನಟ ಕಾರ್ತಿ ಹುಟ್ಟುಹಬ್ಬದ ಪ್ರಯುಕ್ತ ಜಪಾನ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ಗೋಲ್ಡನ್ ಕಲರ್ ಬಟ್ಟೆ, ಹೇವಿ ಬಂಗಾರ ತೊಟ್ಟು ಕಾರ್ತಿ ಕಂಪ್ಲೀಟ್ ಗೋಲ್ಡನ್ ಮ್ಯಾನ್ ಆಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಗೋಲ್ಡನ್ ಬಣ್ಣದ ಗನ್ ಹಿಡಿದು, ಕರ್ಲಿ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್, ನಿರ್ಮಾಪಕರಾದ ಎಸ್ ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್ ಪ್ರಭು ಜಪಾನ್ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಜಪಾನ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾರ್ತಿ

ಕಾರ್ತಿ ನಟನೆಯ 25ನೇ ಸಿನಿಮಾವಾಗಿರುವ ಜಪಾನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ, ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ಹಿಡಿದಿದ್ದಾರೆ. ಶೂಟಿಂಗ್ ಹಂತದಲ್ಲಿರುವ ಜಪಾನ್ ಸಿನಿಮಾವನ್ನು ದೀಪಾವಳಿಗೆ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.

cinibeat