ಕೆಸಿಎಲ್ ಸೀಸನ್ 2 ಫೈನಲ್ಸ್ ಇಂದು
KCL Season 2 – ನಮ್ಮನೆ ಕನ್ಸ್ಟ್ರಕ್ಷನ್ಸ್ ಮೈಸೂರು ಪ್ರಸ್ತುತ ಪಡಿಸುತ್ತಿರುವ, ಗಲ್ಫ್ ಕರ್ನಾಟಕ ಕುಟುಂಬ ಆಯೋಜಿಸಿರುವ ಕರ್ನಾಟಕ ಕ್ರಿಕೆಟ್ ಲೀಗ್ (ಕೆಸಿಎಲ್) ಸೀಸನ್ 2ರ ಅಧಿಕೃತ ಜೆರ್ಸಿ ಮತ್ತು ಟ್ರೋಫಿ ಬಿಡುಗಡೆ ಮಾಡಲಾಗಿತ್ತು. ಇದೀಗ ನವೆಂಬರ್ 22ರಂದು ಆರಂಭವಾಗಿರುವ ಕೆಸಿಎಸ್ ಸೀಸನ್ 2 ಇಂದು ಕೊನೆಯ ಹಂತ ತಲುಪಿದ್ದು, ಫೈನಲ್ಸ್ ನಡೆಯಲಿದೆ.

ದುಬೈಯಲ್ಲಿ ಇತ್ತೀಚೆಗೆ ಬರ್ಷಾ ಹೈಟ್ಸ್ನ ಮಿಲೇನಿಯಮ್ ಪ್ಲೇಸ್ನಲ್ಲಿ ಅನಾವರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜನಪ್ರಿಯ ಕನ್ನಡ ನಟ ಮತ್ತು ಬರಹಗಾರ ಶನೀಲ್ ಗೌತಮ್ , ಯುಎಇ ಮಾಜಿಮಹಿಳಾ ಕ್ರಿಕೆಟ್ ತಂಡದ ನಾಯಕಿ ಛಾಯಾ ಮೊಘಲ್ ಅವರು ಭಾಗವಹಿಸಿದ್ದರು. ಈ ವೇಳೆ ತಂಡದ ಮಾಲೀಕರು, ಆಟಗಾರರು, ಪ್ರಾಯೋಜಕರು, ಕ್ರಿಕೆಟ್ ಪ್ರೇಮಿಗಳು ಇದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸುವ 16 ತಂಡಗಳ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂವಾದಗಳು, ತಂಡದ ಪರಿಚಯ, ಪ್ರಾಯೋಜಕರ ಸ್ವೀಕೃತಿಗಳು ಮತ್ತು ಲೀಗ್ನ ಮುನ್ನೋಟವನ್ನು ತಿಳಿಸಲಾಯಿತು.

ಕೆಸಿಎಲ್ ಸೀಸನ್ 2ರ ಶೀರ್ಷಿಕೆ ಪ್ರಾಯೋಜಕರಾದ ನಮ್ಮನೆ ಕನ್ಸ್ಟ್ರಕ್ಷನ್ ಮೈಸೂರು, ಗೋಲ್ಡ್ ಪ್ರಾಯೋಜಕರಾದ ಕೊರವಿ ಡೆವಲಪರ್ಸ್, ಸಿಲ್ವರ್ ಪ್ರಾಯೋಜಕರಾದ ಸ್ಯಾಂಟೂ ಸೀಲ್ಸ್ ಟೆಕ್ನಾಲಜೀಸ್ ಅವರಿಗೆ ಆಯೋಜಕರು ಕೃತಜ್ಞತೆಗಳನ್ನು ಸಲ್ಲಿಸಿದರು. ಈಗ ಎಲ್ಲರ ಕಣ್ಣುಗಳು ನವೆಂಬರ್ 22 ಮತ್ತು 23ರಂದು ಬಿಜಾಯ್ಸ್ ಕ್ರಿಕೆಟ್ ಕ್ಲಬ್ನಲ್ಲಿ ನಡೆಯಲಿರುವ ಮುಖ್ಯ ಪಂದ್ಯಾವಳಿಯತ್ತ ಮುಖ ಮಾಡಿದೆ. 16 ಬಲಿಷ್ಠ ತಂಡಗಳು 2 ದಿನಗಳ ಕಾಲ ಸ್ಪರ್ಧಿಸಲಿವೆ. ಈ ಕಾರ್ಯಕ್ರಮ ಗಲ್ಫ್ ಕರ್ನಾಟಕ ಕುಟುಂಬ ಮತ್ತು ಕ್ರಿಕೆಟ್ ಪ್ರಿಯರನ್ನು, ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಕೆಸಿಎಲ್ ಸೀಸನ್ 2ರ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸಲು, ಸಮುದಾಯ ಬಾಂಧವ್ಯವನ್ನು ಬೆಳೆಸಲು ಮತ್ತು ವಿಶ್ವ ದರ್ಜೆಯ ಕ್ರಿಕೆಟ್ ಅನುಭವವನ್ನು ನೀಡಲು ಕ್ರಮ ವಹಿಸಲಾಗುತ್ತಿದೆ.
