ʻರಿಚ್ಚಿʼ ಹಾಡಿಗೆ ಸೋನು ನಿಗಮ್‌ ವಾಯ್ಸ್‌, ಮಾನ್ವಿತಾ ರೊಮ್ಯಾನ್ಸ್‌

 ʻರಿಚ್ಚಿʼ ಹಾಡಿಗೆ ಸೋನು ನಿಗಮ್‌ ವಾಯ್ಸ್‌, ಮಾನ್ವಿತಾ ರೊಮ್ಯಾನ್ಸ್‌

ಸೋನು ನಿಗಮ್ ಧ್ವನಿಯಲ್ಲಿ “ರಿಚ್ಚಿ ಹಾಡು”

ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ರಿಚ್ಚಿ” ಚಿತ್ರದ “ಸನಿಹ ನೀ ಇರುವಾಗ” ಎಂಬ ಹಾಡನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು ಸದ್ಯದಲ್ಲೇ A2 ಮ್ಯೂಸಿಕ್ ನಲ್ಲಿ ಬಿಡುಗಡೆ ಯಾಗಲಿದೆ.

ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವೆಂಕಟಾಚಲಯ್ಯ ಹಾಗೂ ರಾಕೇಶ್ ರಾವ್ ಅವರ ಸಹ ನಿರ್ಮಾಣವಿರುವ “ರಿಚ್ಚಿ” ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಅಜಿತ್ ಕುಮಾರ್ ಅವರ ಛಾಯಾಗ್ರಹಣ “ರಿಚ್ಚಿ” ಚಿತ್ರದಲ್ಲಿ “ಟಗರು” ಖ್ಯಾತಿಯ ಮಾನ್ವಿತ ಕಾಮತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

cinibeat