ಜಂಪಿಂಗ್ ಸ್ಟಾರ್ ಈಗ ʻವೆಂಕಟೇಶಾಯ ನಮಃʼ ಅಂತಿದ್ದಾರೆ
ಸ್ಯಾಂಡಲ್ ವುಡ್ ನ ಕಲಾಕಾರ ಎಂದೇ ಹೆಸರು ಮಾಡಿರುವ,ಹರೀಶ್ ರಾಜ್ ನಟಿಸಿ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಮಹೂರ್ತ ನೆರವೇರಿದೆ.
ಬೆಂಗಳೂರಿನ ಆನಂದ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ʻವೆಂಕಟೇಶಾಯ ನಮಃʼ ಚಿತ್ರದ ಮುಹೂರ್ತ ಸರಳವಾಗಿ ಜರುಗಿದೆ. ಚಿತ್ರಕ್ಕೆ ಜನಾರ್ದನ ಬಂಡವಾಳ ಹೂಡಿದ್ದು,ನಾಯಕ ನಟರಾಗಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ ಹರೀಶ್ ರಾಜ್.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮದೇ ಆದಂತಹ ಸುಧೀರ್ಘ ಅನುಭವವನ್ನು ಹೊಂದಿದಂತಹ ಹರೀಶ್ ರಾಜ್ ನಿರಂತರವಾಗಿ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ನಿರ್ದೇಶನವನ್ನು ಸಹ ಮಾಡುತ್ತಿರುವ ಎಲ್ಲರಿಗೂ ಗೊತ್ತಿದೆ.. ತಮ್ಮ ನಿರ್ದೇಶನದ ವೆಂಕಟೇಶಾಯ ನಮಃ ಚಿತ್ರವು ರೋಮ್ಯಾಂಟಿಕ್ ಕಾಮಿಡಿ ಅಂಶವನ್ನು ಹೊಂದಿದ್ದು ಇದರಲ್ಲಿ ಪ್ರೀತಿ ಪ್ರೇಮದ ಜೊತೆಗೆ ಕೌಟುಂಬಿಕ ಅಂಶವೂ ಇರುತ್ತದೆ ಎಂಬುದು ಹರೀಶ್ ರಾಜ್ ಮಾತು..
ಸುಮಾರು 45 ದಿನಗಳ ಒಂದೇ ಷೆಡ್ಯೂಲ್ ನಲ್ಲಿ ಬಹುತೇಕ ಚಿತ್ರೀಕರಣವನ್ನು ಮುಗಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಚಿತ್ರದಲ್ಲಿ ಉಮಾಶ್ರೀ,ತಬಲಾ ನಾಣಿ ಯಂತಹ ಹಿರಿಯ ಕಲಾವಿದರ ಜೊತೆಗೆ ಬಹಳಷ್ಟು ಹೊಸ ಕಲಾವಿದರು ಇದರಲ್ಲಿ ಇರುತ್ತಾರೆ. ಸಿನಿಮಾದ ಹಾಡುಗಳಿಗೆ ಚೇತನ್,ಪ್ರಮೋದ ಮರವಂತೆ ಸಾಹಿತ್ಯವಿದ್ದು, ಶಿವಶಂಕರ್ ಕ್ಯಾಮರಾವರ್ಕ್, ಶ್ರೀನಿವಾಸ್ ಮೂರ್ತಿ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ವೆಂಕಟೇಶಾಯ ನಮಃ ಸಿನಿಮಾದ ಮತ್ತಷ್ಟು ಅಪ್ಡೇಟ್ ಗಳನ್ನ ನಟ ನಿರ್ದೇಶಕ ಹರೀಶ್ ರಾಜ್ ಮುಂದಿನ ದಿನಗಳಲ್ಲಿ ನೀಡಲಿದ್ದಾರೆ.