ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟ ಕೆಜಿಎಫ್ ಗರುಡಾ ರಾಮ್!

 ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟ ಕೆಜಿಎಫ್ ಗರುಡಾ ರಾಮ್!

ಜೆಪಿನಗರದಲ್ಲಿ ನೂತನವಾಗಿ ಶುರುವಾದ ವೋಗ್ ಹೆಲ್ತ್ ಕ್ಲಬ್…

ಆರೋಗ್ಯವೇ ಭಾಗ್ಯ ಅಂತಾರೆ. ಆದರೆ ಆರೋಗ್ಯವಾಗಿ ಇರಬೇಕು ಅಂದ್ರೆ ದೇಹಕ್ಕೆ ವ್ಯಾಯಾಮ, ಊಟದಲ್ಲಿ ಡಯಟ್, ಮನಸ್ಸಿಗೆ ಧ್ಯಾನ ಎಲ್ಲವೂ ಬೇಕು. ಅದರಲ್ಲಂತೂ ಕಳೆದ ಎರಡು ವರ್ಷಗಳಿಂದ ಕೊರೊನಾ ಹಾಗೂ ಲಾಕ್‌ಡೌನ್‌ಗಳ ನಡುವೆ ವರ್ಕ್ ಫ್ರಮ್ ಹೋಮ್‌ನಲ್ಲಿದ್ದವರೇ ಹೆಚ್ಚು. ಹೀಗಾಗಿಯೇ ದೇಹ ದಂಡಿಸುವುದಿರಲಿ, ಮೊದಲು ಕೊರೋನಾ ಕಳೆದುಕೊಂಡರೆ ಸಾಕು ಅಂತ ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಈಗ ಕೊರೊನಾ ಕಂಟಕ ಕಡಿಮೆಯಾಗಿದೆ. ವರ್ಕ್ ಫ್ರಮ್ ಹೋಮ್‌ನಲ್ಲಿದ್ದವರು ಕಚೇರಿಗಳತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲ ಹಿಂದೆAದಿಗಿAತಲೂ ಎಲ್ಲರಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಹೀಗಾಗಿಯೇ ವರ್ಕೌಟ್ ಪ್ರಿಯರು ಮತ್ತೆ ಜಿಮ್‌ನತ್ತ ಮುಖ ಮಾಡಿದ್ದಾರೆ.

ಜೆಪಿ ನಗರ ಸುತ್ತಮುತ್ತಲಿನ ಜಿಮ್‌ಪ್ರಿಯರಿಗೆಂದೇ ನೂತನವಾಗಿ ವೋಗ್ ಹೆಲ್ತ್ ಕ್ಲಬ್ ಆರಂಭವಾಗಿದೆ. ಇತ್ತೀಚೆಗಷ್ಟೇ ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್ ಚಿತ್ರದ ಗರುಡಾ ಖ್ಯಾತಿಯ ನಟ ರಾಮ್ ವೋಗ್ ಹೆಲ್ತ್ ಕ್ಲಬ್ ಉದ್ಘಾಟನೆ ಮಾಡಿದರು. ಜತೆಗೆ ಆರೋಗ್ಯವೇ ಭಾಗ್ಯ, ಹೆಲ್ತ್ ಈಸ್ ವೆಲ್ತ್. ಆರೋಗ್ಯ ಒಂದಿದ್ರೆ ಸಾಕು, ಅದೇ ಖುಷಿ ಜೀವನದ ಗುಟ್ಟು. ನಾನು ಒಂದೋ ಶೂಟಿಂಗ್‌ನಲ್ಲಿ ಇರ್ತೀನಿ ಅಥವಾ ಶೂಟಿಂಗ್ ಇಲ್ಲ ಅಂದರೆ ಜಿಮ್‌ನಲ್ಲಿ ವರ್ಕೌಟ್ ಮಾಡ್ತಿರ್ತೀನಿ’ ಎಂದು ತಾವು ಜಿಮ್‌ನಲ್ಲಿ ದೇಹ ದಂಡಿಸುವ ಬಗ್ಗೆ ಮಾಹಿತಿ ಹಂಚಿಕೊAಡರು. ಜತೆಗೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಸಹ ಜಿಮ್ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ವೋಗ್ ಹೆಲ್ಪ್ ಕ್ಲಬ್ ತಂಡಕ್ಕೆ ಶುಭ ಹಾರೈಸಿದರು.

ಜಾಸ್ ಸ್ಟುಡಿಯೋಸ್ ವತಿಯಿಂದ ಜ್ಯೋಸ್ನಾ ವೆಂಕಟೇಶ್ ಹಾಗೂ ಸಬರೇಷ್ ಈ ವೋಗ್ ಹೆಲ್ತ್ ಕ್ಲಬ್‌ಅನ್ನು ಪ್ರಾರಂಭಿಸಿದ್ದಾರೆ. ಜತೆಗೆ ಪುರುಷ ಮತ್ತು ಮಹಿಳಾ ಬಾಡಿ ಬಿಲ್ಡರ್‌ಗಳಿಂದ ಫ್ಯಾಷನ್ ಶೋ ಕೂಡ ಎಲ್ಲರ ಗಮನ ಸೆಳೆಯಿತು.

cinibeat