ಮಲೈಕಾಗೆ ಬ್ರೇಕ್ಅಪ್ಗೂ ತಡವಿಲ್ಲ,ಬಾಯ್ ಫ್ರೆಂಡ್ಸ್ಗೂ ಬರವಿಲ್ಲ
ಕಳೆದ ವೀಕೆಂಡ್ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಮ್ಯೂಸಿಕಲ್ ನೈಟ್ಸ್ನಲ್ಲಿ ಭಾಗಿಯಾಗಿದ್ದ ನಟಿ ಮಲೈಕಾ ಅರೋರಾ ಹೆಚ್ಚು ಗಮನ ಸೆಳೆದಿದ್ದಾರೆ. ಮಲೈಕಾ ದಿಲ್ಲೋನ್ ಹಾಡುಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡಿದ್ದಾರೆ. ಎಪಿ ಧಿಲ್ಲೋನ್ ಕೂಡ ಮಲೈಕಾ ಅವರನ್ನ ವೇದಿಕೆಗೆ ಆಹ್ವಾನಿಸಿದರು, ಇಬ್ಬರೂ ಸೇರಿ ನೆರೆದಿದ್ದವರ ಮೈಜುಂ ಅನ್ನುವಂತೆ ಮಾಡಿದ್ರು. ಅದಕ್ಕೂ ಇಂಟ್ರೆಸ್ಟಿಂಗ್ ಅನ್ನಿಸಿದ್ದು, ನಿಗೂಢ ವ್ಯಕ್ತಿಯೊಂದಿಗೆ ಮಲೈಕಾ ಸೆಲ್ಫಿ.
ಮಲೈಕಾ ಅರೋರಾ ತಮ್ಮ ಸ್ಟೈಲಿಸ್ಟ್ ರಾಹುಲ್ ವಿಜಯ್ ಜೊತೆಗೆ ಈವೆಂಟ್ನಲ್ಲಿ ಭಾಗಿಯಾಗಿದ್ರು, ಮತ್ತಿವರಿಬ್ಬರು ಕ್ಲಿಕ್ಕಿಸಿಕೊಂಡು ಶೇರ್ ಮಾಡಿರೋ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಮಲೈಕಾ ʻವಿತ್ ಯು’ ಅಂತ ಬರೆದು ರಾಹುಲ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ, ಇದೇ ಫೋಟೋವನ್ನ ರಾಹುಲ್ ಕೂಡ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸ್ಟೈಲಿಸ್ಟ್ ಶೇರ್ಮಾಡಿರೋ ಫೋಟೋ ಹೊಸ ರಿಲೇಷನ್ ಶಿಪ್ನ ಕಥೆ ಹೇಳ್ತಿದೆ.
ಸಿಂಗಮ್ ಎಗೇನ್ ಈವೆಂಟ್ನಲ್ಲಿ ಅರ್ಜುನ್ ಕಪೂರ್ ಮಲೈಕಾ ಜೊತೆಗಿನ ಬ್ರೇಕ್ ಅಪ್ ಘೋಷಿಸಿದ ನಂತ್ರ, ಮಲೈಕಾ ತಮ್ಮ ಲವ್ ಲೈಫ್ ಬಗ್ಗೆ ಎಲ್ಲಿಯೂ ಮಾತನಾಡಿರ್ಲಿಲ್ಲ. ಮಲೈಕಾ ಜೊತೆಗಿನ ಬ್ರೇಕ್ ಅಪ್ ಅನ್ನು ಅರ್ಜುನ್ ಖಚಿತಪಡಿಸಿದ್ದರು. ಈ ನಡುವೆ ಮಲೈಕಾ ಒಂದು ಪೋಸ್ಟ್ ಶೇರ್ ಮಾಡಿದ್ರು, ಅದ್ರಲ್ಲಿ ಸದ್ಯಕ್ಕೆ ತಾವು ಸಿಂಗಲ್ ಅಂತ ಹೇಳಿಕೊಂಡಿದ್ರು. ಆದ್ರೆ ಬ್ರೇಕ್ ಅಪ್ ಕುರಿತಾಗಿ ಹೆಚ್ಚಿನದನ್ನು ಮಲೈಕಾ ಎಲ್ಲಿಯೂ ಶೇರ್ ಮಾಡಿರ್ಲಿಲ್ಲ.
ರಾಹುಲ್ ವಿಜಯ್ ಜೊತೆ ಮಲೈಕಾ ಅರೋರಾ ಡೇಟಿಂಗ್?
ಮಲೈಕಾ ಅರೋರಾ ಮತ್ತು ರಾಹುಲ್ ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಗಾಸಿಪ್ ಗಳಿವೆ. ಕಳೆದ ವಾರ ಇಬ್ಬರೂ ಒಟ್ಟಿಗೆ ಡಿನ್ನರ್ ಔಟಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರ್ಜುನ್ ಕಪೂರ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದ ಮಲೈಕಾಗೆ ಮತ್ತೆ ಪ್ರೀತಿ ಸಿಕ್ಕಿದೆ. ಅರ್ಜುನ್ ಮತ್ತು ಮಲೈಕಾ 2018 ರಲ್ಲಿ ಅರ್ಬಾಜ್ ಖಾನ್ ಅವರಿಂದ ಬೇರ್ಪಟ್ಟ ನಂತರ ಡೇಟಿಂಗ್ ಪ್ರಾರಂಭಿಸಿದರು. ಮಲೈಕಾ ಮತ್ತು ಅರ್ಬಾಜ್ ಮಗ ಅರ್ಹಾನ್ ಖಾನ್ಗೆ ಜನ್ಮ ನೀಡಿದ್ರು.