ಅಭಿರಾಮಚಂದ್ರ ಚಿತ್ರಕ್ಕೆ ಸೆನ್ಸಾರ್ ಭಾಗ್ಯ!
‘ಅಭಿರಾಮಚಂದ್ರ’ನಿಗೆ ಸೆನ್ಸಾರ್ ಮಂಡಳಿಯಿಂದ ಸಿಕ್ತು ಯು/ಎ ಸರ್ಟಿಫಿಕೇಟ್
ಬಿಡುಗಡೆಗೆ ಸಜ್ಜಾಗಿರುವ ಅಭಿರಾಮಚಂದ್ರ ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಪಾಸ್ ಆಗಿದೆ. ನಾಗೇಂದ್ರ ಗಾಣಿಗ ನಿರ್ದೇಶನದ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಅಭಿರಾಮಚಂದ್ರ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥೆ ಹೊತ್ತ ಚಿತ್ರದಲ್ಲಿ ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕಿಯಾಗಿ ಶಿವಾನಿ ರೈ ನಟಿಸಿದ್ದಾರೆ.
ಕುಂದಾಪುರ, ಬೆಂಗಳೂರು, ಮೈಸೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಅಭಿರಾಮಚಂದ್ರ ಸಿನಿಮಾ ಮೂಡಿ ಬರ್ತಿದ್ದು, ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಎ.ಜಿ.ಎಸ್ ಎಂಟಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ. ಫಸ್ಟ್ ಲುಕ್ ಮೂಲಕ ಗಮನಸೆಳೆದಿರುವ ಅಭಿರಾಮಚಂದ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.