ಉಸಿರೇ ಉಸಿರೇ ಚಿತ್ರದಲ್ಲಿ ಬ್ರಹ್ಮಾನಂದಂ, ಅಲಿ!

 ಉಸಿರೇ ಉಸಿರೇ ಚಿತ್ರದಲ್ಲಿ ಬ್ರಹ್ಮಾನಂದಂ, ಅಲಿ!

ಉಸಿರೇ ಉಸಿರೇ.. ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಸಿದ್ದವಾಗುತ್ತಿರುವ ಲೇಟೆಸ್ಟ್ ಸಿನಿಮಾ. ಉಸಿರೇ ಉಸಿರೇ ಎಂದಾಕ್ಷಣ ನೆನಪಾಗುವುದು ಕಿಚ್ಚ ಸುದೀಪ್. ಅದಕ್ಕೆ ಕಾರಣ ಅವರು ನಟಿಸಿದ್ದ ಸೂಪರ್‍ಹಿಟ್ ಹುಚ್ಚ ಚಿತ್ರದ ಬ್ಲಾಕ್‍ಬಸ್ಟರ್ ಸಾಂಗ್ ಉಸಿರೇ ಉಸಿರೇ. ಈಗ ಅದೇ ಸಾಲನ್ನು ಸಿನಿಮಾ ಟೈಟಲ್ ಮಾಡಿಕೊಂಡಿರುವ ಚಿತ್ರಕ್ಕೆ ಖುದ್ದು ಕಿಚ್ಚ ಸುದೀಪ್ ಕೂಡ ಬೆಂಬಲವಾಗಿ ನಿಂತಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನ ಸ್ಫೋಟಕ ಬ್ಯಾಟ್ಸಮನ್ ಹಾಗೂ ಬಿಗ್‍ಬಾಸ್‍ನಲ್ಲೂ ಮಿಂಚಿರುವ ರಾಜೀವ್ ಉಸಿರೇ ಉಸಿರೇ ಚಿತ್ರದ ನಾಯಕ. ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸುತ್ತಿದ್ದಾರೆ. ಕೆಲ ದಿನಗಳಿಂದ ಕೋಲಾರದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ದಕ್ಷಿಣ ಭಾರತದ ಖ್ಯಾತ ಹಾಸ್ಯ ನಟ ಅಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಾಜೀವ್, ಶ್ರೀಜಿತ, ಅಲಿ ಜತೆಗೆ ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಸಾಯಿಕುಮಾರ್ ಹಾಗೂ ಬ್ರಹ್ಮಾನಂದಂ ಕೂಡ ಉಸಿರೇ ಉಸಿರೇ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಕೋಲಾರ, ಚಿಕ್ಕಮಗಳೂರಿನಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಎನ್ ಗೊಂಬೆ ಬ್ಯಾನರ್‍ನ ಅಡಿಯಲ್ಲಿ ಪ್ರದೀಪ್ ಯಾದವ್ ಉಸಿರೇ ಉಸಿರೇ ಸಿನಿಮಾ ನಿರ್ಮಿಸುತ್ತಿದ್ದಾರೆ. ಸಿಎಂ ವಿಜಯ್ ಕಥೆ ಚಿತ್ರಕಥೆ ಬರೆದು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದು, ಸರವಣನ್ ಛಾಯಾಗ್ರಹಣ ಕೆಎಂ ಪ್ರಕಾಶ್ ಸಂಕಲನವಿದೆ.

cinibeat