ಅಗ್ನಿಕುಂಡ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಾರಂಭ

 ಅಗ್ನಿಕುಂಡ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಾರಂಭ

ಭಂಡಾರದ ಒಡೆಯ ಫಿಲಂಸ್​ ಲಾಂಛನದಲ್ಲಿ ನಿವೇದ್ಯ ಭಂಡಾರ ಮತ್ತು ಹೇಮಾವತಿ ಎಂ. ಸ್ವಾಮಿ ನಿರ್ಮಿಸುತ್ತಿರುವ ಅಗ್ನಿಕುಂಡ ಚಿತ್ರಕ್ಕೆ ಶೇಷಾದ್ರಿಪುರದಲ್ಲಿರುವ ಕರ್ನಾಟಕ ಡಿಜಿಟಲ್​ ರೆಕಾರ್ಡಿಂಗ್​ ಸ್ಟುಡಿಯೋನಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯಿತು. ಜನ್ಮಕೊಟ್ಟೆ ನಾ ನಿನಗೆ, ತಾಯಿಯಾದೆ ನೀ ನನಗೆ.. ಹಗಲಿರುಳು ಜೀವನ ತೇದು ಸಲಹಿರುವೆ ನನ್ನನ್ನು… ಎಂದು ಸಾಗುವ ಈ ಗೀತೆಯಲ್ಲು ಅರಸು ಅಂತಾರೆ ರಚಿಸಿದ್ದಾರೆ. ಎಸ್​. ಮಹೇಶ್​ ಬರೆದಿರುವ ಸಂಕೋಚದ ಸ್ಪರ್ಷವಿದೆ ಪ್ರಾಯಕ್ಕದು ಕಲಿಯೋಕೆ ಮನಸ್ಸು ಅದರುತ್ತಿದೆ… ಹಾಡಿನ ಕೆಲಸಗಳೂ ನಡೆಯುತ್ತಿವೆ. ಚಿತ್ರವನ್ನು ಆರ್​. ಮಲ್ಲಿಕಾರ್ಜುನ್​ ನಿರ್ದೇಶಿಸುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಚಿತ್ರಕ್ಕೆ ಪರಮೇಶ್​ ಛಾಯಾಗ್ರಹಣ, ರಾಜ್​ ಕಿಶೋರ್​ ಸಂಗೀತ ನಿರ್ದೇಶನ, ಮನೋಲ್ಲಾಸ ಮಹೇಶ್​ ಸಂಭಾಷಣೆ, ಹರೀಶ್​ ಕುಮ್ಮೆ ಸಂಕಲನ, ಕೌರವ ವೆಂಕಟೇಶ್​ ಮತ್ತು ಟೈಗರ್​ ಶಿವು ಸಾಹಸ ನಿರ್ದೇಶನ, ಹೈಟ್​ ಮಂಜು, ಭೂಷಣ್​ ನೃತ್ಯನಿರ್ದೇಶನವಿರಲಿದೆ. ಮಹಿಳಾ ಪ್ರಧಾನ ಕ್ರೈಮ್​ ಕಿಲ್ಲರ್​ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಮಣಿತು ಚೌಧರಿ, ಬಿರಾಮೂರ್ತಿ, ಸಯಾಜಿ ಶಿಂಧೆ, ಸಾಯಿ ದೀನಾ, ಕುಷಾಲ್​ ಲಾರೆನ್ಸ್​, ಯಶ್​ ಶೆಟ್ಟಿ, ಮುನಿಸ್ವಾಮಿ, ನಾಗರಾಜ ರೆಡ್ಡಿ, ಶ್ವೇತ, ಅಮೂಲ್​ ಗೌಡ, ಅಭಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ.

cinibeat