cinibeat

Cinibeat Kannada Sandalwood

ಬದುಕು ಕಾಯೋ ಚೌಕಿದಾರ ಅಪ್ಪನಿಗಾಗಿ ಈ ಹಾಡು

ಚೌಕಿದಾರ್ ಸಿನಿಮಾ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಚಿತ್ರವೀಗ ಹಾಡಿನ ಮೂಲಕ ಸಿನಿರಸಿಕರಿಗೆ ಆಮಂತ್ರಣ ಕೊಟ್ಟಿದೆ. ಚೌಕಿದಾರ್ ಸಿನಿಮಾದ ಮೊದಲ ಹಾಡು, ‘Appa anthem song‘ MRT ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಅನಾವರಣಗೊಂಡಿದೆ. ಅಪ್ಪ ಮಗನ ಬಾಂಧವ್ಯದ ಗೀತೆಯಲ್ಲಿ ಸಾಯಿ ಕುಮಾರ್ ಹಾಗೂ ಪೃಥ್ವಿ ಅಂಬಾರ್ ತಂದೆ ಮಗನಾಗಿ ಕಾಣಿಸಿಕೊಂಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಪೊಣಿಸಿರುವ ಹಾಡಿಗೆ ಸಚಿನ್ ಬಸ್ರೂರ್ ಸಂಗೀತ, ವಿಜಯ್ ಪ್ರಕಾಶ್ ಅವರ ಧ್ವನಿ […]Read More

Cinibeat Kannada Special

ಅಮೆರಿಕದ ಪ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ

ಅಮೆರಿಕದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್‌ ನಗರದಲ್ಲಿ ನಡೆಯಲಿರುವ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025ಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ RP ಪಂಡಿಂಗ್ ಕನ್ವೆನ್ಸನ್ ಸೆಂಟರ್‌ನಲ್ಲಿ ಆಗಸ್ಟ್ 29ರಿಂದ 31ರವರೆಗೆ ಈ ಐತಿಹಾಸಿಕ ಸಮಾವೇಶ ನಡೆಯಲಿದೆ.‌ ಈ ಕುರಿತು ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ನಾವಿಕ ಅಧ್ಯಕ್ಷರಾದ ಶಿವಕುಮಾರ್, ಸಮಾವೇಶ ಸಂಚಾಲಕರಾದ ಹರ್ಷಿತ್ ಗೌಡ,  ಹಿರಿಯ ನಟ ಪ್ರಣಯರಾಜ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, […]Read More

Bollywood Cinibeat Hollywood Kannada Sandalwood

ರಾಮಾಯಣಕ್ಕಾಗಿ ಯಶ್ ಜೊತೆಯಾದ ಹಾಲಿವುಡ್ ಖ್ಯಾತ ಸ್ಟಂಟ್ ನಿರ್ದೇಶಕ

ರಾಮಾಯಣ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಬಹು ಕೋಟಿ ವೆಚ್ಚದ ಸಿನಿಮಾ. ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಈ‌ ಸಿನಿಮಾದಲ್ಲಿ ಯಶ್ ಭಾಗಿಯಾಗಿದ್ದಾರೆ.  ಭಾರತೀಯ‌ ಸಿನಿಮಾರಂದಲ್ಲಿ ಭಾರಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರೋ ರಾಮಾಯಣ ಸಿನಿಮಾದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿಲೀಸ್ ಆಗಿದೆ . ರಾಮಾಯಣ ಸಿನಿಮಾಗಾಗಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದೆ.  ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy norris)ನಿರ್ದೇಶನ ಮಾಡುತ್ತಿದ್ದಾರೆ . ರಾಮಾಯಣ ಭಾರತೀಯ‌ ಸಿನಿಮಾರಂಗದಲ್ಲಿಯೇ ಬಿಗ್ […]Read More

Cinibeat Kannada Sandalwood

DUDE ಚಿತ್ರಕ್ಕೆ ನಾನೇ ಸಾರಥಿ ಅಂದ್ರು ತೇಜ್

ನಟ ನಿರ್ದೇಶಕ ತೇಜ್ ಸಾರಥ್ಯದಲ್ಲಿ ಬರುತ್ತಿರುವ DUDE ಚಿತ್ರದ ಶೀರ್ಷಿಕೆಯು ಯಾವುದೇ ವಿವಾದವಿಲ್ಲದೇ ಬಗೆ ಹರಿದ ಬಗ್ಗೆ,ಪತ್ರಿಕಾ ಗೋಷ್ಟಿಯಲ್ಲಿ ತೇಜ್ ಸ್ಪಷ್ಟ ಪಡಿಸಿದರು. ಕನ್ನಡ ಭಾಷೆಯಲ್ಲಿ DUDE ಚಿತ್ರವನ್ನೂ ರಿಲೀಸ್ ಮಾಡಿ, ಅದೇ ಸಮಯದಲ್ಲಿ ತೆಲುಗು ಹಾಗೂ ಮಲಯಾಳಂ ನಲ್ಲಿಯೂ ತಮ್ಮ DUDE ಅನ್ನೂ ಡಬ್ ಮಾಡಿ ಬಿಡುಗಡೆ ಮಾಡಬೇಕು ಎಂದಿದ್ದ ತೇಜ್ ಗೆ,ಸ್ವಲ್ಪ ಬೇಸರವಾಗಿದ್ದು ನಿಜ.. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ DUDE ಹೆಸರಿನ ಶೀರ್ಷಿಕೆ ನೋಂದಣಿ ಆದಂತಹ ವಿಚಾರ ತಿಳಿದ ತಕ್ಷಣ,ನಟ ನಿರ್ದೇಶಕ […]Read More

Cinibeat Kannada Sandalwood

ಭಜರಂಗಿ ಲೋಕಿ ʼದಿಲ್‌ದಾರ್ʼ ಲುಕ್!

ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ `ದಿಲ್ ದಾರ್’. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಅಣಿಗೊಂಡಿರುವ ಚಿತ್ರತಂಡವೀಗ ಭಜರಂಗಿ ಲೋಕಿ ಅವರಿಗೆ ಪೋಸ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇದರೊಂದಿಗೆ ಭಜರಂಗಿ ಲೋಕಿಯ ಲುಕ್ ಕೂಡಾ ರಿವೀಲ್ ಆದಂತಾಗಿದೆ. ಹಂತ ಹಂತವಾಗಿ ಪಾತ್ರಗಳ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಳ್ಳುತ್ತಿರುವ ಚಿತ್ರತಂಡ, ಇದೀಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಜರಂಗಿ ಲೋಕಿ ಪಾತ್ರದ ಚಹರೆಯನ್ನು ಜಾಹೀರಾಗಿಸಿದೆ. ಇದು ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದರಲ್ಲಿ ಭಜರಂಗಿ ಲೋಕಿ ವಿಲನ್ […]Read More

Cinibeat Kannada Sandalwood

ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ! ಯಾವಾಗ ತೆರೆಗೆ?

ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಐವರು ಪ್ರತಿಭಾನ್ವಿತ ನಿರ್ದೇಶಕರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷ. ಬೀರ್ ಬಲ್ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತಾನಾಡಿದ ನಿರ್ದೇಶಕ ರತನ್ ಗಂಗಾಧರ್, ಈ ಸಿನಿಮಾ […]Read More

Cinibeat Kannada Sandalwood

ತೆರೆಗೆ ಬರಲಿದೆ ‘ವೆಂಕಟೇಶ’ನ ಪ್ರೇಮಕಥೆ

‘ನಮೋ ವೆಂಕಟೇಶ’ – ಹೀಗೊಂದು ಹೆಸರಿನ ಸಿನಿಮಾ ಸದ್ದಿಲ್ಲದೆ ತೆರೆಗೆ ಬರಲು ತಯಾರಾಗುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ನಮೋ ವೆಂಕಟೇಶ’ ಸಿನಿಮಾದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ‘ನಮೋ ವೆಂಕಟೇಶ’ನ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ. ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಇನ್ನು ಎರಡು-ಮೂರು ತಿಂಗಳಲ್ಲಿ ತೆರೆಮೇಲೆ ‘ನಮೋ ವೆಂಕಟೇಶ’ ನ ದರ್ಶವನ್ನು ಕಣ್ತುಂಬಿಕೊಳ್ಳಬಹುದು ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. ಅಂದಹಾಗೆ, ಈ ಸಿನಿಮಾದ ಹೆಸರು ‘ನಮೋ […]Read More

Cinibeat Kannada Sandalwood

ರಕ್ತಸಿಕ್ತ ಅವತಾರದಲ್ಲಿ ʼಚೌಕಿದಾರ್‌ʼ ಪೃಥ್ವಿ ಅಂಬರ್ ಅಬ್ಬರ

ಪೃಥ್ವಿ ಅಂಬರ್ ಹಾಗೂ ಧನ್ಯ ರಾಮ್ ಕುಮಾರ್ ನಟನೆಯ ಚೌಕಿದಾರ್ ಸಿನಿಮಾದ ಟೀಸರ್ MRT ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ರಕ್ತಸಿಕ್ತ ಅವತಾರವೆತ್ತಿರುವ ಪೃಥ್ವಿ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ನಾಯಕಿ ಧನ್ಯ ರಾಮ್ ಕುಮಾರ್ ಡಿ ಗ್ಲಾಮರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಎಲ್ಲಾ ಪಾತ್ರಗಳನ್ನು ತೋರಿಸಿರುವ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ ನಲ್ಲಿ ಸುಧಾರಾಣಿ‌ […]Read More

Cinibeat Kannada Sandalwood

ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ಟೀಸರ್ ರಿಲೀಸ್

ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವವ ಪೈಕಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಒಬ್ಬರು. ಅವರ ತಾಯಿ ತಮ್ಮದೇ  PA Productions  ಸಂಸ್ಥಾಪಿಸಿದ್ದು, ಈ ನಿರ್ಮಾಣ ಸಂಸ್ಥೆಯಡಿ ಕೊತ್ತಲವಾಡಿ ಎಂಬ ಚೊಚ್ಚಲ ಚಿತ್ರ ತಯಾರಾಗಿದೆ. ಈ ಟೀಸರ್‌ ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ಒರೆಯನ್‌ ಮಾಲ್‌ ನಲ್ಲಿ ನಡೆಯಿತು. ಟೀಸರ್‌ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಪುಷ್ಪ ಅರುಣ್‌ ಕುಮಾರ್‌, ಯಶ್‌ ತಂದೆ ಅರುಣ್‌ ಕುಮಾರ್‌, ನಟ ಪೃಥ್ವಿ ಅಂಬರ್‌, ನಟಿ ಕಾವ್ಯ,  ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ […]Read More