ಗೀತಾ ಪಿಕ್ಚರ್ಸ್ 4ನೇ ಪ್ರೊಡಕ್ಷನ್ ಘೋಷಣೆ | ನಾಯಕ ಧೀರನ್ ರಾಮ್ಕುಮಾರ್ ಈ ವರ್ಷದ ಬ್ಲಾಕ್ಬಸ್ಟರ್ ಭೈರತಿ ರಣಗಲ್ ಯಶಸ್ಸಿನ ನಂತರ, ಗೀತಾ ಪಿಕ್ಚರ್ಸ್ ಮತ್ತೊಂದು ಹ್ಯಾಟ್ರಿಕ್ ಘೋಷಣೆಗೆ ಸಿದ್ಧವಾಗಿದೆ! ನವೆಂಬರ್ 14ರಂದು A For Anand, ಡಾ. ಶಿವರಾಜ್ಕುಮಾರ್ ಅವರ ಹೊಸ ಚಿತ್ರವನ್ನು ಘೋಷಿಸಿದ ಈ ಬ್ಯಾನರ್, ಡಾ. ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನದ ನಿಮಿತ್ತ ತಮ್ಮ 4ನೇ ಚಿತ್ರವನ್ನು ಇಂದು ಪ್ರಕಟಿಸಿದೆ. ಈ ಹೊಸ ಚಿತ್ರದಲ್ಲಿ ಧೀರನ್ ರಾಮ್ಕುಮಾರ್ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು […]Read More
“ಪುಷ್ಪ ೨” ಚಿತ್ರವು ಅವಧಿಗೂ ಮುನ್ನ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಂಡಿರುವುದಕ್ಕಾಗಿ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರಿಗೆ ಹಾಗೂ ಬೆಂಗಳೂರು ಡೆಪ್ಯುಟಿ ಕಮೀಷನರ್ ಹಾಗೂ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಜಗದೀಶ್ ಅವರಿಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಗೌರವ ಕಾರ್ಯದರ್ಶಿಗಳಾದ ಡಿ.ಕೆ.ರಾಮಕೃಷ್ಣ ಹಾಗೂ ಜಂಟಿ ಕಾರ್ಯದರ್ಶಿಗಳಾದ ರಮೇಶ್ ಯಾದವ್ ಅಭಿನಂದನೆ ತಿಳಿಸಿದರುRead More
“ಕಲ್ಟ್” ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಡ್ರೋನ್ ಅವಘಡ. ಚಿತ್ರತಂಡದ ಮೇಲೆ ಹಾಕಿದ ಕೇಸ್ ಹಿಂಪಡೆದ ಡ್ರೋನ್ ಟೆಕ್ನೀಷಯನ್ ಸಂತೋಷ್ . ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರದ ಚಿತ್ರೀಕರಣ ಚಿತ್ರದುರ್ಗದ ಬಳಿ ನಡೆಯುತ್ತಿದ್ದಾಗ ಡ್ರೋನ್ ಕ್ಯಾಮೆರಾ ಆಕಸ್ಮಿಕವಾಗಿ ವಿಂಡ್ ಫ್ಯಾನ್ ಗೆ ಸಿಲುಕಿ ಹಾನಿಯಾಗಿತ್ತು. ಇದೊಂದು ಆಕಸ್ಮಿಕ ಘಟನೆ. ಆದರೆ ಡ್ರೋನ್ ಟೆಕ್ನೀಷಿಯನ್ ಸಂತೋಷ್ ಅವರು ಡ್ರೋನ್ ಕ್ಯಾಮೆರಾ ಗೆ ಆದ ಹಾನಿಯಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಹಾಗೂ […]Read More
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ “ಈ ಪಾದ ಪುಣ್ಯಪಾದ” ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ . ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದಖ್ಯಾತಿಯ ನಿರ್ದೇಶಕರಾದ ಸಿದ್ದು ಪೂರ್ಣಚಂದ್ರರವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮತ್ತೊಂದು ಚಿತ್ರ”ಈ ಪಾದ ಪುಣ್ಯಪಾದ”.ಇತ್ತೀಚಿಗೆ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರವಾಗಿರುವುದರಿಂದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಕೂಡ ಹೊಸ […]Read More
ಬಹು ನಿರೀಕ್ಷಿತ “45” ಚಿತ್ರಕ್ಕೆ ಹಾಲಿವುಡ್ ನ ಹೆಸರಾಂತ ತಂತ್ರಜ್ಞರಿಂದ ವಿ.ಎಫ್.ಎಕ್ಸ್ . ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಯವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ “45” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ […]Read More
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಆರಂಭವಾಗಿ 9 ವಾರಗಳು ಉರುಳಿವೆ. 10ನೇ ವಾರ ಚಾಲ್ತಿಯಲ್ಲಿದೆ. ಈಗಾಗಲೇ ‘ಬಿಗ್ ಬಾಸ್’ ಮನೆಯಿಂದ ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್ ಔಟ್ ಆಗಿದ್ದಾರೆ. ರಂಜಿತ್, ಜಗದೀಶ್ ಕಿಕ್ ಔಟ್ ಆಗಿದ್ದಾರೆ. ಶೋಭಾ ಶೆಟ್ಟಿ ಕ್ವಿಟ್ ಮಾಡಿದ್ದಾರೆ. ಈ ವಾರ ಯಾರು ಔಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ಈ ವಾರ ಎಲಿಮಿನೇಷನ್ ಇಲ್ಲ. ಈ ವಾರ.. ಅರ್ಥಾತ್ 10ನೇ ವಾರದ ನಾಮಿನೇಷನ್ […]Read More
ʻನೋಡಿದವರು ಏನಂತಾರೆ’ ತೆರೆಗೆ ಬರಲು ರೆಡಿ…ಜ.31ಕ್ಕೆ ನವೀನ್ ಶಂಕರ್ ಸಿನಿಮಾ ರಿಲೀಸ್ ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಸಿನಿಮಾ ಬಿಡುಗಡೆ ರೆಡಿ. ಜ.31ಕ್ಕೆ ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ಸಿನಿಮಾ ರಿಲೀಸ್ ಫಸ್ಟ್ ಲುಕ್ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಶಿಷ್ಟ ಶೀರ್ಷಿಕೆಯುಳ್ಳ ನೋಡಿದವರು ಏನಂತಾರೆ ಚಿತ್ರ ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಲು ಸಿದ್ಧವಾಗಿದೆ. ಈ ಸಿನಿಮಾವನ್ನು ಕುಲದೀಪ್ ಕಾರಿಯಪ್ಪ ಅವರು ಬರೆದು ನಿರ್ದೇಶಿಸಿದ್ದು, ನಾಗೇಶ್ ಗೋಪಾಲ್ ಅವರು ನಿರ್ಮಾಣ ಮಾಡಿದ್ದಾರೆ. ‘ನೋಡಿದವರು […]Read More
ತನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಸ್ಥೈರ್ಯವನ್ನು ಸಂಭ್ರಮಿಸುವುದೇ “ನಾನು ಭಾಗ್ಯ” ಅಭಿಯಾನದ ಗುರಿ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ. ಕಲರ್ಸ್ […]Read More
‘ತಾಯವ್ವ’ನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್… ಕನ್ನಡ ಚಿತ್ರರಂಗದಲ್ಲೀಗ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆಯೇ ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳು ಪ್ರೇಕ್ಷಕರ ಗಮನಸೆಳೆಯುತ್ತವೆ. ಈ ಸಾಲಿಗೀಗ ಹೊಸ ಸೇರ್ಪಡೆ ತಾಯವ್ವ. ಸೂಲಗಿತ್ತಿ ಸುತ್ತ ಸಾಗುವ ಕಥೆಯಾಗಿರುವ ತಾಯವ್ವನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ತಾಯವ್ವ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಆರ್.ಅಶೋಕ್ ಹಾಗೂ […]Read More
2025ರ ಜನವರಿ 24ರಂದು ಮಲ್ಟಿಸ್ಟಾರರ್ ಚಿತ್ರ “ಫಾರೆಸ್ಟ್” ಬಿಡುಗಡೆ . ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಮಲ್ಟಿ ಸ್ಟಾರರ್ ಸಿನಿಮಾ “ಫಾರೆಸ್ಟ್”. ಶೀರ್ಷಿಕೆ, ತಾರಾಗಣ, ಕನ್ಸೆಪ್ಟ್, ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಬಹು ನಿರೀಕ್ಷಿತ “ಫಾರೆಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2025 ರ ಜನವರಿ 24 ರಂದು ಈ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ […]Read More