ಸೆಲಿಬ್ರೇಷನ್ ಟೀ ಸಂಸ್ಥೆಯಿಂದ ಗಾಯಕ ವಿಜಯ್ ಪ್ರಕಾಶ್ ಹುಟ್ಟುಹಬ್ಬ!
![ಸೆಲಿಬ್ರೇಷನ್ ಟೀ ಸಂಸ್ಥೆಯಿಂದ ಗಾಯಕ ವಿಜಯ್ ಪ್ರಕಾಶ್ ಹುಟ್ಟುಹಬ್ಬ!](https://cinibeat.com/wp-content/uploads/2022/02/41d14363-73a3-463b-9bc4-ced0657f4ed1-850x560.jpg)
ಸೆಲಿಬ್ರೇಷನ್ ಟೀ ವತಿಯಿಂದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಮಾಧ್ಯಮಗೋಷ್ಠಿಯ ನಂತರ ವಿಜಯ್ ಪ್ರಕಾಶ್ ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು.
ವಿಜಯ್ ಪ್ರಕಾಶ್ ಸೆಲಿಬ್ರೇಷನ್ ಟೀ ಸಂಸ್ಥೆಯ ರಾಯಭಾರಿಯೂ ಹೌದು.
ಕರ್ನಾಟಕದ ಯುವ ಪ್ರತಿಭೆಗಳು ಹುಟ್ಟುಹಾಕಿರುವ ಸಂಸ್ಥೆ “ಸೆಲಿಬ್ರೇಷನ್ ಟೀ”.
![](https://cinibeat.com/wp-content/uploads/2022/02/41d14363-73a3-463b-9bc4-ced0657f4ed1.jpg)
ನಾವಿಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಅತೀ ಹೆಚ್ಚು ಓದಿದ್ದರಿಂದ ನಮಗೆ ಎಲ್ಲೂ ಕೆಲಸ ಸಿಗಲಿಲ್ಲ. ಕೊನೆಗೆ ನಾವು ಕೆಲವು ಸಾಫ್ಟ್‌ವೇರ್ ಕಂಪನಿಗಳಿಗೆ ಆಹಾರ ಒದಗಿಸುವ ಕಾರ್ಯ ಆರಂಭಿಸಿದ್ದೆವು. ಕೊರೋನ ಬಂದು ಆದು ನಿಂತು ಹೋಯಿತು. ಆನಂತರ ಯೋಚಿಸಿ ಒಂದು ವರ್ಷದ ಹಿಂದೆ ಈ ಟೀ ಸಂಸ್ಥೆ ಆರಂಭಿಸಿದ್ದೆವು. ಕೇವಲ ಒಂದೇ ವರ್ಷದಲ್ಲಿ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಫಲಿತಾಂಶ ಕಂಡಿದ್ದೇವೆ. ನಮ್ಮ ಈ ವಿಷಯವನ್ನು ವಿಜಯ್ ಪ್ತಕಾಶ್ ಅವರ ಬಳಿ ಹೇಳಿಕೊಂಡಾಗ ಅವರು ರಾಯಭಾರಿಯಾಗಲು ಒಪ್ಪಿಕೊಂಡರು. ಕಮರ್ಷಿಯಲ್ ಸಂಸ್ಥೆಯೊಂದಕ್ಕೆ ವಿಜಯ್ ಪ್ರಕಾಶ್ ರಾಯಭಾರಿ ಆಗಿರುವುದು ಇದೇ ಮೊದಲು. ವಿವಿಧ ಫ್ಲೇವರ್ ಗಳಲ್ಲಿ ಲಬ್ಯವಿರುವ ನಮ್ಮ ಟೀ ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಕರ್ನಾಟಕದ ಹದಿನೆಂಟು ಜಿಲ್ಲೆಗಳಲ್ಲದೆ, ಪಕ್ಕದ ಆಂದ್ರ ಹಾಗೂ ತೆಲಂಗಾಣದಲ್ಲೂ ನಮ್ಮ ಟೀ ಗೆ ಬೇಡಿಕೆ ಹೆಚ್ಚಿದೆ. ಮುಂದೆ ಟೀ ಅಷ್ಟೇ ಅಲ್ಲದೇ ಕಾಫಿಪುಡಿ, ರವೆ, ಬೇಳೆ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟಗೆ ತರಲಿದ್ದೇವೆ. ಈ ಯಶಸ್ಸಿಗೆ ನಮ್ಮ ಹಿಂದೆ ನಿಂತವರು ಅನೇಕರು. ಅವರಿಗೆಲ್ಲಾ ನಾನು ಆಭಾರಿ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿರುವ ವಿಜಯ್ ಪ್ರಕಾಶ್ ಆವರಿಗೆ ವಿಶೇಯ ಧನ್ಯವಾದ ಎಂದರು ಸೆಲಿಬ್ರೇಷನ್ ಟೀ ಸಂಸ್ಥೆ ಸ್ಥಾಪಕರಾದ ಚಂದನ್ ಹಾಗೂ ಪವನ್.
![](https://cinibeat.com/wp-content/uploads/2022/02/57e565f1-8084-4702-9c1e-4c02d8f0e269.jpg)
ನಾನು ಕೂಡ ಮೈಸೂರು ಬಿಟ್ಟು ಮುಂಬೈಗೆ ಹೋದಾಗ ಕಷ್ಟದ ದಿನಗಳನ್ನು ಕಂಡಿದ್ದೀನಿ. ಅಲ್ಲಿ ನನಗೆ ನನ್ನ ಗುರುಗಳು ಆಸರೆ ನೀಡಿದರು. ನಾವು ಮೈಸೂರಿನವರು ಹೆಚ್ಚು ಕಾಫಿ ಪ್ರಿಯರು. ಆದರೆ ನನಗೆ ಮುಂಬೈಗೆ ಹೋದ ಮೇಲೆ ಟೀ ಅಭ್ಯಾಸವಾಯಿತು. ಈ ಹುಡಗರು ಬಂದು ನನ್ನ ಕೇಳಿದಾಗ,ಅವರ ಉದ್ದೇಶ ಒಳ್ಳೆಯದಾಗಿರುವುದರಿಂದ ಒಪ್ಪಿಕೊಂಡೆ. ಕೊನೆಯವರೆಗೂ ನಿಮ್ಮ ಒಳ್ಳೆಯತನ ಹೀಗೆ ಇರಲಿ. ನನ್ನ ತಾಯಿ ಹಾಗೂ ಪತ್ನಿ ಇಬ್ಬರು ಇಲ್ಲೇ ಇದ್ದಾರೆ. ಅವರ ಹಾಗೂ ನಿಮ್ಮೆಲ್ಲರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ. ಈ ಹೊಸ ತಂಡದ ಹೊಸ ಕನಸಿಗೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ಗಾಯಕ ವಿಜಯ್ ಪ್ರಕಾಶ್.
![](https://cinibeat.com/wp-content/uploads/2022/02/2d8231b6-be95-49ca-9efa-bc39596d6f1f.jpg)
ಅರೇಕ ಟೀ ಸಂಸ್ಥೆಯ ನಿವೇದನ್ ಹಾಗೂ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಕ್ರಂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೆಲಿಬ್ರೇಷನ್ ಟೀ ಜಾಹೀರಾತನ್ನು ಇದೇ ಸಮಯದಲ್ಲಿ ಅನಾವರಣಗೊಳಿಸಲಾಯಿತು.