ಒನ್ ವುಮನ್ ಆರ್ಮಿ ಗೌರಿಶ್ರೀ!

 ಒನ್ ವುಮನ್ ಆರ್ಮಿ ಗೌರಿಶ್ರೀ!

ಜನರಕ್ಷಕ… ನಾ ಭಕ್ಷಕ ಚಿತ್ರದ ಮೂಲಕ ಹೊಸ ಸಾಹಸ..

ಚಿತ್ರರಂಗದಲ್ಲಿ ಕ್ಯಾಮರಾ ಮುಂದೆ ನಟನೆಗೆ ಮಾತ್ರ ನಟಿಮಣಿಯರು ಸೀಮಿತ ಎಂಬ ಕಾಲವೊಂದಿತ್ತು. ಆದರೆ ಈಗೀಗ ನಟನೆ ಜತೆಗೆ ನಿರ್ಮಾಣ, ನಿರ್ದೇಶನ, ಸಂಗೀತ ನಿರ್ದೇಶನ ಸೇರಿದಂತೆ ಬೇರೆ ಬೇರೆ ವಿಭಾಗಗಳಲ್ಲೂ ಹೆಣ್ಣುಮಕ್ಕಳು ಕೆಲಸ ಮಾಡುತ್ತಿದ್ದಾರೆ. ಆ ಸಾಲಿನಲ್ಲೂ ಒನ್ ವುಮನ್ ಆರ್ಮಿಯಾಗಿ ನಿಲ್ಲುವ ಪ್ರತಿಭೆ ಗೌರಿಶ್ರೀ.

ಹೌದು, ಕಳೆದ ಹಲವು ವರ್ಷಗಳಿಂದ ಕೊರಿಯೋಗ್ರಫರ್, ಡ್ಯಾನ್ಸರ್ ಆಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಗೌರಿಶ್ರೀ ಇದೇ ಮೊದಲ ಬಾರಿಗೆ ನಿರ್ದೇಶನ, ನಿರ್ಮಾಣ ಮಾಡುವುದರ ಜೊತೆ ಜೊತೆಗೆ ಜನರಕ್ಷಕ… ನಾ ಭಕ್ಷಕ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಿರ್ಮಾಪಕ ಚಿನ್ನೇಗೌಡರು, ಹಿರಿಯ ಪೋಷಕ ನಟ ಕರಿಸುಬ್ಬು, ನೃತ್ಯ ನಿರ್ದೇಶಕ ಫೈವ್ ಸ್ಟಾರ್ ಗಣೇಶ್ ಭಾಗವಹಿಸಿದ್ದರು. ಯುವ ಉತ್ಸಾಹಿ ತಂಡಕ್ಕೆ ಶುಭ ಹಾರೈಸಿದರು.

ವಿಟೂ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಗೌರಿಶ್ರೀ ಜನರಕ್ಷಕ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಮಿಮಿಕ್ರಿ ಮಾಡುವವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟು ವರ್ಷಗಳ ಅನುಭವಗಳನ್ನು ಈ ಸಿನಿಮಾಗೆ ಧಾರೆಯೆರೆದು ಪ್ರೇಕ್ಷಕರಿಗೆ ಕಥೆ ಹೇಳುವ ಪ್ರಯತ್ನ ಗೌರಿಶ್ರೀ ಅವರದು. ವಿಟೂ ಡ್ಯಾನ್ಸ್ ಅಕಾಡೆಮಿ ಪ್ರಾರಂಭಿಸಿದಾಗ ನಟ ಪುನೀತ್ ರಾಜ್‍ಕುಮಾರ್ ಅವರು ಧನಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡರು ಗೌರಿಶ್ರೀ.

ಇದೇ ಸಂದರ್ಭದಲ್ಲಿ ಗೌರಿಶ್ರೀ ಮತ್ತು ಅವರ ಜನರಕ್ಷಕ ಚಿತ್ರಕ್ಕೆ ಶುಭ ಹಾರೈಸಿದ ಹಿರಿಯ ನಿರ್ಮಾಪಕ ಚಿನ್ನೇಗೌಡರು ಡಾ. ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಕುರಿತ ಕೆಲ ಅಪರೂಪದ ವಿಷಯಗಳನ್ನು ಹಂಚಿಕೊಂಡರು. ಅಪ್ಪು ನೆನೆಯುತ್ತಾ ನೃತ್ಯ ನಿರ್ದೇಶಕ ಫೈವ್ ಸ್ಟಾರ್ ಗಣೇಶ್ ಭಾವುಕರಾದರು.

cinibeat