ಜಯಂ : ಪವರ್ ಆಫ್​ ವಿಕ್ಟರಿ – ಸೆಟ್ಟೇರಿದೆ ಹೊಸಬರ ಹೊಚ್ಚ ಹೊಸ ಚಿತ್ರ

 ಜಯಂ : ಪವರ್ ಆಫ್​ ವಿಕ್ಟರಿ – ಸೆಟ್ಟೇರಿದೆ ಹೊಸಬರ ಹೊಚ್ಚ ಹೊಸ ಚಿತ್ರ

ಚಂದನವನದಲ್ಲಿ ಹೊಸಬರ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ಜಯಂ’ ಚಿತ್ರವೊಂದು ಸೆಟ್ಟೇರಿದೆ. ಪವರ್ ಆಫ್ ವಿಕ್ಟರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಮೊನ್ನೆಯಷ್ಟೇ ಮಾಗಡಿ ರಸ್ತೆಯಲ್ಲಿರುವ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.

ಧೀರಜ್​ ಶೆಟ್ಟಿ, ಶ್ರುತಿ ಗೌಡ

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ನಾನಾ ವಿಭಾಗಗಳಲ್ಲಿ ಕೆಲಸ ಕಲಿತಿರುವ ಧೀರಜ್‌ಶೆಟ್ಟಿ ಸಿನಿಮಾಕ್ಕೆ ರಚನೆ,ಚಿತ್ರಕಥೆ, ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಆರ್ಮಿ ರಜೆಯಲ್ಲಿದ್ದು, ಸಮಯ ವ್ಯರ್ಥ ಮಾಡದೆ ಶಾಲೆಯಲ್ಲಿ ಶಿಕ್ಷಕ ಅಲ್ಲದೆ ಕೋಚ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಶಿಕ್ಷಕಿಯಾಗಿ ಶೃತಿಗೌಡ ನಾಯಕಿ. ವಿದ್ಯಾರ್ಥಿಗಳಾಗಿ ಪವನ್‌ಚಾಮು, ಅಹಲ್ಯಶೆಟ್ಟಿ, ಖಳನಾಗಿ ನಂದನ್ ಇವರೊಂದಿಗೆ ವಿಜಯ್‌ಚೆಂಡೂರ್, ವೈಭವ್‌ನಾಗರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸಪ್ತಾದ್ರಿ ಫಿಲಿಂಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಧ್ರುವಕುಮಾರ್ ಸಹ ನಿರ್ಮಾಪಕರು.
ಕ್ರೀಡೆ ಕುರಿತ ಚಿತ್ರವಾಗಿದ್ದು, ಕಬ್ಬಡ್ಡಿ ಆಟದ ಪಂದ್ಯಾವಳಿಗಳು ಮತ್ತು ಎರಡು ಟ್ರ್ಯಾಕ್‌ಗಳಲ್ಲಿ ಅಂದರೆ ಶಿಕ್ಷಕ-ಶಿಕ್ಷಕಿ, ವಿದ್ಯಾರ್ಥಿ-ವಿದ್ಯಾರ್ಥಿನಿ ನಡುವೆ ಪ್ರೀತಿ ಸನ್ನಿವೇಶಗಳು ಬರಲಿದೆ. ಕೆಜಿಎಫ್, ಕಬ್ಜ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದ ಕಿನ್ನಾಲ್‌ರಾಜ್ ನಾಲ್ಕು ಹಾಡುಗಳನ್ನು ಬರೆಯುತ್ತಿದ್ದಾರೆ. ಆಕಾಶ್ ಪರ್ವ ಸಂಗೀತ, ವಿಘ್ನೇಶ್ ಛಾಯಾಗ್ರಹಣ, ಪವನ್‌ಗೌಡ ಸಂಕಲನ, ಗೀತಾಸೈ ನೃತ್ಯ ನಿರ್ವಹಣೆ ಇದೆ. ಮಂಡ್ಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

ನಾಯಕ ಧೀರಜ್​ ಶೆಟ್ಟಿ, ನಾಯಕಿ ಶ್ರುತಿ ಗೌಡ

cinibeat