ಕಿಡಿಗೇಡಿಗಳನ್ನು ಹಿಡಿದು ಬಡಿದ ಬಹದ್ದೂರ್ ಗಂಡು ಕಿರಣ್ ರಾಜ್
“ಕನ್ನಡತಿ” ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಅಭಿನಯದ “ಬಹದ್ದೂರ್ ಗಂಡು” ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಂದಿ ಬೆಟ್ಟದ ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿಂದ ದೊಣ್ಣೆ ವರಸೆ ಕಲಿತಿದ್ದರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತದೆ. ವಿನೋದ್ ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿ ಯಾಗಿ ಈ ಸನ್ನಿವೇಶ ಮೂಡಿಬಂದಿದೆ.
ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಪ್ರಸಿದ್ದ್ ತಿಳಿಸಿದ್ದಾರೆ. ಪ್ರಸಿದ್ದ್ ಸಿನಿಮಾಸ್ ಮತ್ತು ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ, ವೆಂಕಿ ಯು ಡಿ ವಿ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಕಿರಣ್ ರಾಜ್, ಯಶಾ ಶಿವಕುಮಾರ್, ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಸುರೇಖ, ನಾಗೇಶ್ ರೋಹಿತ್, ಶಬರಿ ಮಂಜು, ಮಡೆನೂರ್ ಮನು, ಗೋವಿಂದೇ ಗೌಡ, ವಾಣಿ, ರಂಜಿತ್ ಖನ್ನಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.