ಪ್ರೀತಿಗಿಬ್ಬರು ಈ ರಂಗಭೂಮಿ ಪ್ರತಿಭೆಗಳು!

 ಪ್ರೀತಿಗಿಬ್ಬರು ಈ ರಂಗಭೂಮಿ ಪ್ರತಿಭೆಗಳು!

  ’ಪ್ರೀತಿಗಿಬ್ಬರು’ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರುಗಳು ರಂಗಭೂಮಿ ಹಿನ್ನಲೆಯಿಂದ ಬಂದವರು ಎಂಬುದು ವಿಶೇಷ. ಕೆ.ವಿ.ರಾಜು, ಎಂ.ಎಸ್.ರಮೇಶ್ ಬಳಿ ಕೆಲಸ ಕಲಿತಿರುವ ಷಾಂಡಿಲ್ಯ.ಬಿ.ಟಿ ಕಥೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ತಿರುಪತಿ ಮೂಲದ ಬಿಲ್ಡರ್ ಆಗಿರುವ ಬಿ.ಬಾಲಾಜಿಬೊರ್ಲಿಗೊರ್ಲ ಅವರು ಅಕ್ಷತಾ ಮೂವೀಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ರಾಜಕೀಯ, ಕ್ರಿಕೆಟ್ ಇದರಲ್ಲಿ ಒಬ್ಬರು ನೆನಪಿಗೆ ಬರುತ್ತಾರೆ. ಆದರೆ ನಿರ್ದೇಶಕರ ದೃಷ್ಟಿಯಲ್ಲಿ ಪ್ರೀತಿ ಎಂದರೆ ಚಿತ್ರದ ನಾಯಕ, ನಾಯಕಿ ನೆನಪಾಗುತ್ತಾರೆ. ಇಂತಹುದೇ ಅಂಶಗಳನ್ನು ತೆಗೆದುಕೊಂಡು ಒಂದು ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ. ಕೆಲವು ಕಷ್ಟಕರ ಸನ್ನಿವೇಶದಲ್ಲಿ ಪ್ರೇಮಿಗಳು ತಮ್ಮ ಬದುಕಿನಲ್ಲಿ ಒಂದಾಗಾತ್ತಾರೋ ಇಲ್ಲವೋ ಎಂದು ತೋರಿಸುವ ಪ್ರಯತ್ನ ಮಾಡಲಾಗಿದೆ. ಜತೆಗೆ ಜಾತಿ ಎಂಬ ವಿಷಯವು ಸಣ್ಣ ಏಳೆಯಾಗಿ ಬಂದು ಹೋಗುತ್ತದೆ.

ಇಬ್ಬರು ಹೆಣ್ಣು ಮಕ್ಕಳು ಖತರ್‌ನಾಕ್ ಖಳನಾಯಕಿಯರಾಗಿ ಅಬ್ಬರಿಸಿದ್ದಾರೆ. ನಾಯಕನಾಗಿ ಗೋವಿಂದ. ನಾಯಕಿಯಾಗಿ ನಿರೋಷಶೆಟ್ಟಿಗೆ ಎರಡನೇ ಅವಕಾಶ. ವಿಲನ್‌ಗಳಾಗಿ ಮಂಜುಳಾ ಮತ್ತು ಕಾವ್ಯಪ್ರಕಾಶ್, ಅಣ್ಣನಾಗಿ ಚಿರಾಗ್, ಇವರೊಂದಿಗೆ ಶೈಲೇಶ್, ಸಂದೀಪ್ ಮುಂತಾದವರು ನಟಿಸಿದ್ದಾರೆ. ಸಂಗೀತ ಅನುರಾಗ್‌ರೆಡ್ಡಿ, ಹಿನ್ನಲೆ ಶಬ್ದ ಎ.ಟಿ.ರವೀಶ್, ಛಾಯಾಗ್ರಹಣ ರಮೇಶ್‌ಗೌಡ, ಸಂಕಲನ ಅರ್ಜುನ್‌ಕಿಟ್ಟು, ಸಾಹಿತ್ಯ ಡಾ.ದೊಡ್ಡರಂಗೇಗೌಡ, ಸಾಹಸ ಆರ್ಯನ್‌ಶ್ರೀನಿವಾಸನ್-ಅಶೋಕ್, ನೃತ್ಯ ಪ್ರವೀಣ್ ಅವರದಾಗಿದೆ. ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗಮಂಗಲ, ಕೊಳ್ಳೆಗಾಲ, ಮರವಂತೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

        ಪ್ರಚಾರದ ಸಲುವಾಗಿ ಚಿತ್ರದ ಟ್ರೇಲರ್‌ನ್ನು ಮಾದ್ಯಮದವರಿಗೆ ತೋರಿಸಲಾಯಿತು. ಯುಎ ಪ್ರಮಾಣಪತ್ರ ಪಡೆದುಕೊಂಡಿರುವ ಚಿತ್ರವನ್ನು ಇದೇ ತಿಂಗಳಲ್ಲಿ ವಿತರಕ ರಮೇಶ್ ಮುಖಾಂತರ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

cinibeat