ಬಾಲಿವುಡ್‌ನ ಎಲ್ಲಾ ಕಲೆಕ್ಷನ್ ದಾಖಲೆ ಪುಡಿ ಪುಡಿ ಮಾಡಿದ ಪುಷ್ಪ-2
ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಫುಲ್ ಹವಾ ಕ್ರಿಯೇಟ್ ಮಾಡುತ್ತಿದೆ. ರಿಲೀಸ್ ಆದ ಒಂದು ವಾರದಲ್ಲೇ 1,000 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ ಎಂದು ಹೇಳಲಾಗುತ್ತಿದೆ. ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಪುಷ್ಪ 2 ಸಿನಿಮಾ ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲೇ ಹಣ ಸಂಗ್ರಹ ಮಾಡುತ್ತಿದೆ.
ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ಭಾರತ ಸೇರಿದಂತೆ ವರ್ಲ್ಡ್ವೈಡ್ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಅಂದಿನಿಂದ ಸಿನಿಮಾ ಥಿಯೇಟರ್ಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವ ಸಿನಿಮಾ ಹಣ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರ ನಟನೆಗೆ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಇನ್ನು ಐಕಾನ್ ಸ್ಟಾರ್ ಮ್ಯಾನರಿಸಂಗೆ ಥಿಯೇಟರ್ಗಳಲ್ಲಿ ಶಿಳ್ಳೆ, ಚಪ್ಪಾಳೆಗೆ ಏನೂ ಕಡಿಮೆ ಇಲ್ಲ.
ದಕ್ಷಿಣ ಭಾರತ ಮಾತ್ರವಲ್ಲ ಹಿಂದಿ ಮಾತನಾಡುವ ಪ್ರದೇಶಗಳಲ್ಲೂ ಅಲ್ಲು ಅರ್ಜುನ್ ಈ ಸಿನಿಮಾದ ಮೂಲಕ ತಮ್ಮನ್ನು ಗುರುತಿಸಿಕೊಂಡಂತೆ ಆಗಿದೆ. ಪಂಜಾಬ್, ರಾಜಸ್ಥಾನ್, ಮುಂಬೈ, ಬಿಹಾರ್, ಗುಜರಾತ್ ಸೇರಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಪುಷ್ಪ ಮೂವಿಯ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂದಿಯಲ್ಲಿ ಮಾತ್ರ ಪುಷ್ಪ ಮೂವಿ 600 ಕೋಟಿ ರೂಪಾಯಿಗಳನ್ನು ಕಲೆಕ್ಟ್ ಮಾಡಿದೆ ಎನ್ನಲಾಗಿದೆ. ಈ ವಾರದಲ್ಲಿ ಹಿಂದಿಯಲ್ಲಿ ₹700 ಕೋಟಿಯನ್ನು ಮೀರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ಕೇವಲ 6 ದಿನಗಳಲ್ಲಿ ಸುಲ್ತಾನ್ (₹301 ಕೋಟಿ), ಭಜರಂಗಿ ಭಾಯಜಾನ್ (₹315.50 ಕೋಟಿ), ಸಂಜು (₹334.50 ಕೋಟಿ), ಟೈಗರ್ ಜಿಂದಾಹೈ (₹339 ಕೋಟಿ), ದಂಗಾಲ್ (₹374.50 ಕೋಟಿ) ಈ ಎಲ್ಲ ಹಿಂದಿ ಸಿನಿಮಾಗಳ ರೆಕಾರ್ಡ್ ಅನ್ನು ಪುಷ್ಪ ಬ್ರೇಕ್ ಮಾಡಿದೆ. ಇನ್ನು ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಈ ವಾರ ಅನಿಮಲ್, ಪಠಾಣ್, ಗದರ್, ಜವಾನ್ ಸಿನಿಮಾಗಳ ದಾಖಲೆ ಉಡೀಸ್ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.