ಅಗ್ನಿ ಶ್ರೀಧರ್ ಸಾರಥ್ಯದಲ್ಲಿ “ಕ್ರೀಂ”. ಸಂಯುಕ್ತ ಹೆಗಡೆ ನಾಯಕಿ, ಅಭಿಷೇಕ್ ಬಸಂತ್ ನಿರ್ದೇಶನ

 ಅಗ್ನಿ ಶ್ರೀಧರ್ ಸಾರಥ್ಯದಲ್ಲಿ “ಕ್ರೀಂ”. ಸಂಯುಕ್ತ ಹೆಗಡೆ ನಾಯಕಿ,  ಅಭಿಷೇಕ್ ಬಸಂತ್ ನಿರ್ದೇಶನ

ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡ ಚಿತ್ರರಸಿಕರ ಮನಗೆದ್ದಿದೆ. ಈಗ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ “ಕ್ರೀಂ” ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ಅಭಿಷೇಕ್ ಬಸಂತ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. “ಕಿರಿಕ್ ಪಾರ್ಟಿ” ಖ್ಯಾತಿಯ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿದ್ದಾರೆ. ಡಿ.ಕೆ.ದೇವೇಂದ್ರ  ನಿರ್ಮಾಣ ಮಾಡುತ್ತಿದ್ದಾರೆ.

ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.
ಚಿಕ್ಕಂದಿನಿಂದಲೂ ನನಗೆ ಸಿನಿಮಾ ಬಗ್ಗೆ ಆಸಕ್ತಿ. ನನ್ನ ಮನೆಯವರು ನನ್ನನ್ನು ಹಾಗೆ ಬೆಳೆಸಿದ್ದರು. ಆ ನಂತರ ಎಂ ಬಿ ಎ ಹಾಗೂ ಎಂ ಎಸ್ ಮಾಡಿದೆ. ಈಗ ನನ್ನ ಆಸೆಯಂತೆ ಚಿತ್ರರಂಗದತ್ತ ಬಂದಿದ್ದೀನಿ.  ನನ್ನ ಅನುಭವ ಅಂದರೆ ಹೆಡ್ ಬುಷ್ ಚಿತ್ರದಲ್ಲಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಗ್ನಿ ಶೀಧರ್ ಸರ್ ಅವರ ಒಡನಾಟದಿಂದ, ಅವರ ಜೊತೆ ಆಡಿರುವ ಮಾತುಗಳಿಂದ ಹೆಚ್ಚಿನ ಅನುಭವ ಪಡಿದಿದ್ದೇನೆ. ನೀನು ನಿರ್ದೇಶನ ಮಾಡು ಎಂದು ಹೇಳಿದ್ದೆ ಅವರು. ಅಗ್ನಿ ಶ್ರೀಧರ್ ಅವರಿಗೆ ನನ್ನ ವಂದನೆಗಳು ಎಂದರು ನಿರ್ದೇಶಕ ಅಭಿಷೇಕ್ ಬಸಂತ್.


ನಾನು ಕಥೆ ಕೇಳಲು ಹೊದಾಗ ತುಂಬಾ ಕುತೂಹಲ ಮನೆಮಾಡಿತ್ತು. ನನ್ನ ಪಾತ್ರದ ಬಗ್ಗೆ ನಾನು ಹೇಳುವುದಕ್ಕಿಂತ ಅಗ್ನಿ ಶ್ರೀಧರ್ ಸರ್ ಹೇಳಿದರೆ ಒಂದು ಕಳೆ. ನಾನು ಈ ಚಿತ್ರದಲ್ಲಿ ಫಿಮೇಲ್ ಹೀರೋ ಅನ್ನಬಹುದು. ಈ ಅವಕಾಶ ನೀಡಿದ್ದಕ್ಕೆ ಅಗ್ನಿ ಶ್ರೀಧರ್ ಸರ್ ಗೆ ಧನ್ಯವಾದ. ನಾನು ಈವರೆಗೂ ಮಾಡಿರದ ಪಾತ್ರ ಅಂತ ಹೇಳಬಹುದು ಎಂದರು ಸಂಯುಕ್ತ ಹೆಗಡೆ.

ನನ್ನ ನಿರ್ಮಾಣದ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಕಥೆ ಕೊಟ್ಟಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಅವರಿಗೆ ವಿಶೇಷ ಧನ್ಯವಾದ. ಪ್ರೇಕ್ಷಕರಿಗೆ ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ತೆಲುಗಿನಲ್ಲಿ ಕೆಲವು ಚಿತ್ರ ನಿರ್ಮಾಣ ಮಾಡಿ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದೀನಿ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ದೇವೇಂದ್ರ .

ಈ ಚಿತ್ರದಲ್ಲಿ ರೋಶನ್ ಅವರು ಸಹ ಅಭಿನಯಿಸುತ್ತಿದ್ದಾರೆ.
ಸಮಾರಂಭಕ್ಕೆ ಅತಿಥಿಯಾಗಿ ‌ಆಗಮಿಸಿದ್ದ ಕೆ.ಮಂಜು ಅವರು‌ ಚಿತ್ರತಂಡಕ್ಕೆ ಶುಭಕೋರಿದರು. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. 
ಸಂವರ್ಧಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಕೆ.ದೇವೇಂದ್ರ  ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶಿಸುತ್ತಿದ್ದಾರೆ. ಸುನೋಜ್ ವೇಲಾಯುಧನ್ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

cinibeat