Breaking News : ಲೇಡಿ ಫ್ಯಾನ್‌ ಸಾವು, ಅಲ್ಲು ಅರ್ಜುನ್‌ ಅರೆಸ್ಟ್‌

 Breaking News : ಲೇಡಿ ಫ್ಯಾನ್‌ ಸಾವು, ಅಲ್ಲು ಅರ್ಜುನ್‌ ಅರೆಸ್ಟ್‌

ಪುಷ್ಪ 2 (Pushpa 2) ಸಿನಿಮಾ ಸಕ್ಸಸ್‌ನಲ್ಲಿದ್ದ ನಟ ಅಲ್ಲು ಅರ್ಜುನ್‌ಗೆ (Allu Arjun) ಬಿಗ್‌ ಶಾಕ್‌ ಎದುರಾಗಿದೆ. ನಟ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಅರೆಸ್ಟ್‌ (Allu Arjun Arrest) ಮಾಡಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್‌ ಅವರನ್ನು ಅರೆಸ್ಟ್‌ ಮಾಡಿದ್ದಾರೆ.

ಡಿಸೆಂಬರ್‌ 4 ರಂದು ಪುಷ್ಪ 2 ಸಿನಿಮಾ ರಿಲೀಸ್ ದಿನ ದುರ್ಘಟನೆಯೊಂದು ನಡೆದು ಹೋಗಿತ್ತು. ಸಂಧ್ಯ ಥಿಯೇಟರ್‌ನಲ್ಲಿ ಕಾಲ್ತುಳಿತ ನಡೆದಿದ್ದು ಗೊತ್ತೇ ಇದೆ. ಇದೇ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ರು.

ಕಾಲ್ತುಳಿತ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಸೇರಿಸಿದ್ದರು.

ಆದರೆ ಅಲ್ಲು ಅರ್ಜುನ್ ಈಗಾಗಲೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಅಲ್ಲು ಅರ್ಜುನ್‌ ಹಠಾತ್ ಬಂಧನದಿಂದ ಚಿತ್ರರಂಗದ ಜೊತೆಗೆ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

cinibeat