ಕಾರುಣ್ಯಾ ಕಾಲಲ್ಲಿರೋ ಶೂ ಬೆಲೆ ಎಷ್ಟು ಲಕ್ಷ ಗೊತ್ತಾ?

 ಕಾರುಣ್ಯಾ ಕಾಲಲ್ಲಿರೋ ಶೂ ಬೆಲೆ ಎಷ್ಟು ಲಕ್ಷ ಗೊತ್ತಾ?

ದುಬೈನಲ್ಲಿ ಸ್ಯಾಂಡಲ್‍ವುಡ್ ಸುಂದರಿಯ ಸವಾರಿ…

ಸ್ಯಾಂಡಲ್‍ವುಡ್ ನಟಿ ಕಾರುಣ್ಯಾ ರಾಮ್, ಕಳೆದ 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. 2010ರಲ್ಲಿ ಸೀನ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಈ ಚೆಲುವೆ ಮತ್ತೊಂದ್ ಮದುವೆ, ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಎರಡು ಕನಸು, ಕೆಫೆ ಗ್ಯಾರೇಜ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಎರಡು ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇನ್ನು ಕಾರುಣ್ಯಾ ರೇಮೊ ಹಾಗೂ ಪೆಟ್ರೋಮ್ಯಾಕ್ಸ್ ಚಿತ್ರಗಳಲ್ಲೂ ನಟಿಸಿದ್ದು ಆ ಸಿನಿಮಾಗಳು ಇದೇ ವರ್ಷ ತೆರೆಗೆ ಬರಲಿವೆ. ಹಾಗಂತ ಎಲ್ಲ ಚಿತ್ರಗಳಲ್ಲೂ ಅವರದು ಹೀರೋಯಿನ್ ಪಾತ್ರವೇನಲ್ಲ. ಬದಲಾಗಿ ಗೆಸ್ಟ್ ಅಪಿಯರೆನ್ಸ್, ಸ್ಪೆಷಲ್ ಸಾಂಗ್ ಹಾಗೂ ಪೋಷಕ ಪಾತ್ರಗಳಲ್ಲೂ ನಟಿಸಿದ್ದಾರೆ ಕಾರುಣ್ಯಾ.

ಇಂತಹ ಕಾರುಣ್ಯಾ ಕೆಲ ತಿಂಗಳ ಹಿಂದಷ್ಟೇ ಐಶಾರಾಮಿ ಬಿಎಂಡಬ್ಲ್ಯೂ ಕಾರ್ ಖರೀದಿಸಿ ಸುದ್ದಿಯಾಗಿದ್ದರು. ಈ ಕಾರಿನ ಬೆಲೆ 67 ಲಕ್ಷ ರೂಪಾಯಿಯಿಂದ 71 ಲಕ್ಷ ರೂಪಾಯಿ. ನಟಿ ಅಂದ ಮಾತ್ರಕ್ಕೆ ಐಶಾರಾಮಿ ಕಾರು ಖರೀದಿಸಬಾರದಾ? ನಟಿಯರು ಕೆಲಸ ಮಾಡುವುದಿಲ್ಲವೇ? ಅಂತೆಲ್ಲಾ ಪ್ರಶ್ನೆ ಮೂಡಬಹುದು. ಆದರೆ ಇಲ್ಲಿ ಕಾರುಣ್ಯಾ ರಾಮ್ ಅವರ ಯಶಸ್ಸಿನ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಬದಲಾಗಿ ಅವರು ಇತ್ತೀಚೆಗೆ ಖರೀದಿಸಿರುವ ಶೂ ಬೆಲೆ ಕೇಳಿದರೆ ಎಂಥವರೂ ಶಾಕ್ ಆಗುತ್ತೀರ.

ಹೌದು, ಕೆಲ ದಿನಗಳಿಂದ ನಟಿ ಕಾರುಣ್ಯಾ ರಾಮ್ ಮತ್ತು ಅವರ ಗರ್ಲ್ ಗ್ಯಾಂಗ್ ದುಬೈ ಪ್ರವಾಸದಲ್ಲಿದೆ. ವಿಶೇಷ ಅಂದರೆ ದೂರದ ದುಬೈನಲ್ಲೂ ನಮ್ಮ ಕನ್ನಡದ ಹುಡುಗಿಯರು ಕನ್ನಡ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಎಲ್ಲರ ಗಮನ ಸೆಳೆದಿದ್ದಾರೆ.

ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಕಾರುಣ್ಯಾ ಕಾಲಿಗೆ ಧರಿಸಿದ್ದ ಶೂ ಎಲ್ಲರ ಕಣ್ಣು ಕುಕ್ಕಿದೆ. ಅವರೇ ಎಲ್ಲರ ಕಣ್ಣಿಗೆ ಕುಕ್ಕುವಂತೆ ಕಾಲಲ್ಲಿ ಧರಿಸಿದ್ದ ಶೂಗಳನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಕಾರಣ ಇವು ಲೂಯೀಸ್ ವಿಟ್ಟಾನ್‍ನ ಕಿಕ್ಸ್‍ಕ್ರೂ ಶೂಗಳು. ಬೆಲೆ ಬರೋಬ್ಬರಿ 1910 ಡಾಲರ್ ಮತ್ತು ಟ್ಯಾಕ್ಸ್ ಅರ್ಥಾತ್ 1 ಲಕ್ಷ 42 ಸಾವಿರ ರೂಪಾಯಿ ಮತ್ತು ಅದರ ಮೇಲೆ ಕೇವಲ ಐದು ಶೇಕಡಾ ಟ್ಯಾಕ್ಸ್ ಅಂದರೂ ಬರೋಬ್ಬರಿ 1.50 ಲಕ್ಷ ಅಂತರ್ಥ.

ಬಹುಶಃ ಇದುವರೆಗೂ ಕನ್ನಡದ ಯಾವ ನಟಿಯೂ ಅಥವಾ ಸ್ಟಾರ್ ಸೂಪರ್‍ಸ್ಟಾರ್ ಸಹ ಇಷ್ಟು ದುಬಾರಿ ಮೊತ್ತದ ಶೂಗಳನ್ನು ಧರಿಸಿಲ್ಲ ಅನ್ನಿಸುತ್ತೆ. ಆ ದಾಖಲೆಯನ್ನೀಗ ನಟಿ ಕಾರುಣ್ಯಾ ರಾಮ್ ಮಾಡಿದ್ದಾರೆ.

cinibeat