ಪುಷ್ಪ-2 ಜಾತ್ರೆ ಸೀನ್‌ಗೆ ಕತ್ತರಿ, ವಿಜಯ್ ದೇವರಕೊಂಡ ವಿಲನ್
ಪುಷ್ಪಾ 2 ಕುರಿತು ಆಘಾತಕಾರಿ ಅಪ್‌ಡೇಟ್ ಸಿಕ್ಕಿದೆ. ಹಲವಾರು ಮನರಂಜನಾ ಸುದ್ದಿ ಪೋರ್ಟಲ್‌ಗಳು ವರದಿ ಮಾಡಿದಂತೆ, ಸೌದಿ ಅರೇಬಿಯಾದಲ್ಲಿ ಚಲನಚಿತ್ರದ ಪ್ರಮುಖ ಸರಣಿಯನ್ನು ತೆಗೆದುಹಾಕಲಾಗಿದೆ. 60 ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಲಾದ ಗಂಗಮ್ಮ ದೇವಿ ಜಾತ್ರೆ ದೃಶ್ಯವನ್ನು ಚಿತ್ರದಿಂದ ಕಡಿತಗೊಳಿಸಲಾಗಿದೆ. ಹೀಗಾಗಿ ಅಲ್ಲು ಅರ್ಜುನ್ ಸಿನಿಮಾದ ರನ್ ಟೈಮ್ 19 ನಿಮಿಷ ಕಡಿಮೆಯಾಗಿದೆ.
ಸೌದಿ ಅರೇಬಿಯಾ ಸೆನ್ಸಾರ್ ಮಂಡಳಿಯು ಜಾತ್ರೆ ಸೀನ್‌ಅನ್ನು ಟ್ರಿಮ್ ಮಾಡುವಂತೆ ಸೂಚನೆ ನೀಡಿದೆ. ಹಾಗಾಗಿ ಸಿನಿಮಾ ಸೌದಿಯಲ್ಲಿ ಜಸ್ಟ್ 3 ಗಂಟೆ, 1 ನಿಮಿಷದ ಅಂತಿಮ ರನ್‌ಟೈಮ್‌ನೊಂದಿಗೆ ಬಹು ಕಟ್‌ಗಳ ನಂತರ ಬಿಡುಗಡೆಗೆ ಅವಕಾಶ ನೀಡಿದೆ. ದುಃಖದ ಸಂಗತಿಯೆಂದರೆ ಸೌದಿ ಅರೇಬಿಯಾದಲ್ಲಿನ ಅಭಿಮಾನಿಗಳು ಜಾತ್ರೆ ದೃಶ್ಯವನ್ನು ನೋಡೋದಿಲ್ಲ. ಚಿತ್ರದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾದ ಈ ಸೀನ್‌ನಲ್ಲಿನ ಅಲ್ಲು ಅರ್ಜುನ್ ಅಭಿನಯವನ್ನು ಎಲ್ಲರೂ ಹೊಗಳ್ತಾ ಇದ್ದಾರೆ. ಆದರೆ ಇದೇ ದೃಶ್ಯಕ್ಕೆ ಕತ್ತರಿ ಬಿದ್ದಿರೋದು ಬೇಸರದ ಸಂಗತಿ.
ಪುಷ್ಪ 2 ಚಿತ್ರದಲ್ಲಿ ಜಗದೀಶ್ ಪ್ರತಾಪ್ ಬಂಡಾರಿ, ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯಾ ಭಾರದ್ವಾಜ್ ಮತ್ತು ರಾವ್ ರಮೇಶ್ ಕೂಡ ನಟಿಸಿದ್ದಾರೆ. ನಟಿ ಶ್ರೀಲೀಲಾ ಕುಣಿದಿರೋ ಕಿಸ್ಸಿಕ್ ಸಾಂಗ್ ಕಿಕ್ ಏರಿಸುತ್ತದೆ. ಪುಷ್ಪ 3 ಬರೋದು ಕೂಡ ಕನ್‌ಫರ್ಮ್ ಆಗಿದೆ. ಈ ಸಿನಿಮಾಕ್ಕೆ ಪುಷ್ಪ 3: ದಿ ರಾಂಪೇಜ್ ಎಂದು ಹೆಸರಿಸಲಾಗಿದೆ. ಪುಷ್ಪ 3 ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿಲನ್ ಆಗಿ ನಟಿಸಲಿದ್ದಾರೆ ಅನ್ನೋದು ಬಹುತೇಕ ಪಕ್ಕಾ ಆಗಿದೆ.