ಯುವರಾಜನ ಹುಟ್ಟುಹಬ್ಬಕ್ಕೆ 5ನೇ ಚಿತ್ರ ಲಾಂಚ್!

 ಯುವರಾಜನ ಹುಟ್ಟುಹಬ್ಬಕ್ಕೆ 5ನೇ ಚಿತ್ರ ಲಾಂಚ್!

ಯುವರಾಜ’ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್..ಜನವರಿ 22ಕ್ಕೆ ನಿಖಿಲ್ ಐದನೇ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್!

ಸ್ಯಾಂಡಲ್ ವುಡ್ ಯುವರಾಜ.. ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಗೆ ಜನವರಿ 22 ರಂದು ಹುಟ್ಟುಹಬ್ಬದ ಸಂಭ್ರಮ. ರೈಡರ್ ಬರ್ತ್ ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗ್ತಿರುವ..ನಿಖಿಲ್ ನಟಿಸ್ತಿರುವ ಐದನೇ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಸಕಲ ರೀತಿಯಿಂದ ಸಜ್ಜಾಗಿದೆ. ಸಂಕ್ರಾಂತಿ ಹಬ್ಬ ಮುಗಿಸಿಕೊಂಡು ಶೂಟಿಂಗ್ ಅಖಾಡಕ್ಕೆ ಧುಮುಕಿದ್ದ ಯುವರಾಜನ ಹೊಸ ಸಿನಿಮಾಗೆ ಮಂಜು ಅಥರ್ವ ಆಕ್ಷನ್ ಕಟ್ ಹೇಳಿದ್ದಾರೆ.


ಕಳೆದ ಏಳು ವರ್ಷಗಳಿಂದ ಮಂಜು ಅಥರ್ವ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮಂಜು, ತಮಿಳಿನ ಕದಿರನ್ ಜತೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ನಿಖಿಲ್ ಹಾಗೂ ಮಂಜು ಅಥರ್ವ ಸಹಯೋಗದಲ್ಲಿ ಮೂಡಿ ಬತ್ತಿರುವ ಹೊಸ ಸಿನಿಮಾದ‌ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ನಿಖಿಲ್ ಅವರ ಭಾಗದ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಕೆವಿಎನ್ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ನಿಖಿಲ್ ಸಿನಿಮಾವನ್ನು ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯಕ್ಕೆ ಚಿತ್ರದ ಎಲ್ಲಾ ಪಾತ್ರಗಳು ಫೈನಲ್ ಆಗಿಲ್ಲ. ಚಿತ್ರಕ್ಕೆ ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದಾರೆ. ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್ ನವೀನ್ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ನೀಡಿರುವ ಚಿತ್ರ ತಂಡ ಸದ್ಯದಲ್ಲಿಯೇ ಟೈಟಲ್ ಜೊತೆಗೆ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ಹೊರ ಬೀಳಲಿದೆ.

cinibeat